ಬಂಟ್ವಾಳ: ಮನುಷ್ಯರು ಸತ್ಯ ನಿಷ್ಠೆ, ಸಾತ್ವಿಕತೆ, ಸುಸಂಸ್ಕøತರಾಗಿ ಆತ್ಮಸ್ಥೈರ್ಯದಿಂದ ಬದುಕಲು ಆರಾಧನಾಲಯಗಳು ಪ್ರೇರಣೆಯಾಗಿವೆ.ಇದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವಂತಾಗಬೇಕು ಕೋಟಿ ಚೆನ್ನಯ್ಯರ ಜೀವನ ಸಂದೇಶ ಅವರ ಗರಡಿಗಳಿಂದ ಶಾಶ್ವತವಾಗಿ ಉಳಿಯುವಂತಾಗಿದೆ.ಅವರ ಜೀವನ ನಮಗೆಲ್ಲರಿಗೂ ಸೂರ್ತಿಯಾಗಲಿ ಎಂದು ಶ್ರೀ ಕ್ಷೇತ್ರ ಬಲ್ಯೋಟ್ಟು ವಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅವರು ಹೇಳಿದರು.

2105pkt1(Kakyapdavu Garadi)
ಸುಮಾರು 3 ಕೋಟಿ ರೂ. ವೆಚ್ಚದಲ್ಲಿ, ತೌಳವ ದ್ರಾವಿಡ ಶೈಲಿಯಲ್ಲಿ, ಸಂಪೂರ್ಣ ಶಿಲಾಮಯವಾಗಿ ಪುನರ್ನಿರ್ಮಾಣಗೊಂಡಿರುವ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ನಾಲ್ಕನೇ ದಿನವಾದ ಸೋಮವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.ಮಾಜಿ ಸಚಿವ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯ್ಯರು ತಮ್ಮ ಜೀವಿತ ಕಾಲದಲ್ಲಿ ಶೋಷಣೆ,ಜಾತಿ ತಾರತಮ್ಯ,ದೌರ್ಜನ್ಯದ ವಿರುದ್ಧ ನಡೆಸಿದ ಹೋರಾಟ ಇಂದಿನ ಸಾಮಾಜಿಕ ನ್ಯಾಯದ ಜೀವನ ಪದ್ಧತಿಗೆ ಬುನಾದಿಯಾಗಿದೆ. ಅಂತೆಯೇ ಹಿಂದಿನ ಕಾಲದ ಸಮಾಜದ ಸ್ಥಿತಿ ಗತಿ,ಹಿರಿಯರ ಜೀವನ ಪದ್ಧತಿ ಇವುಗಳ ಬಗ್ಗೆ ಇತಿಹಾಸದ ನೆನಪು ಮಾಡುವುದು ಅಗತ್ಯವಾಗಿದೆ. ನಿರ್ದಿಷ್ಟ ಸೈದ್ಧಾಂತಿಕ ನಿಲುವುಗಳಿಂದ ಇಂದು ಶೋಷಣೆಮುಕ್ತ ಸಮಾಜದ ನಿರ್ಮಾಣ ಸಾಧ್ಯವಾಗಿದೆ ಎಂದು ಹೇಳಿದರು.

2105pkt2A

ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಕಕ್ಯಪದವಿನಲ್ಲಿ ಸುಂದರ ಗರಡಿ ನಿರ್ಮಾಣಕ್ಕೆ ಸಮಿತಿಯ ಜವಾಬ್ದಾರಿಯುತ ನಿರ್ವಹಣೆಯಿಂದ ಸಾಧ್ಯವಾಗಿದ್ದು, ಅಭಿನಂದಾರ್ಹರು ಎಂದ ಅವರು ಗರಡಿಯ ಅಭಿವೃದ್ಧಿ ಕಾರ್ಯಗಳಿಗೆ ತನ್ನ ಅನುದಾನದಿಂದ 5 ಲಕ್ಷ ರೂ. ಅನುದಾನ ನೀಡುವುದಾಗಿ ತಿಳಿಸಿದರು.

2105pkt2
ಬಿ.ಸಿ.ರೋಡ್ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪೆÇ್ರ| ತುಕಾರಾಮ ಪೂಜಾರಿ, ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ದಾಮೋದರ ಸಾಲ್ಯಾನ್, ಪ್ರಗತಿಪರ ಕೃಷಿಕ ಬಟ್ಯಪ್ಪ ಪೂಜಾರಿ, ಕೊರಂಟಬೆಟ್ಟು ಗರೊಡಿಯ ಅಧ್ಯಕ್ಷ ಸದಾನಂದ ಪೂಜಾರಿ ಮುಂಬಯಿ, ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಾಬು ಪೂಜಾರಿ ಕೌಡಾಡಿ, ಕ್ಷೇತ್ರದ ಮೊಕ್ತೇಸರ, ಬಾರ್ದಡ್ಡುಗುತ್ತು ರಾಜವೀರ ಜೈನ್, ರಾಜ್ಯ ಧಾರ್ಮಿಕ ಪರಿಷತ್ತ್ ಸದಸ್ಯ ಪದ್ಮನಾಭ ಕೋಟ್ಯಾನ್, ಮುಂಬಯಿ ಉದ್ಯಮಿ ಹರೀಶ್ ಪೂಜಾರಿ ಸಿದ್ದಕಟ್ಟೆ, ಪಂಜಿಕಲ್ಲು ಗರಡಿ ಮೊಕ್ತೇಸರ ಪೀರ್ದೊಟ್ಟುಗುತ್ತು ಶ್ರೀಪ್ರಕಾಶ್ ಕುಮಾರ್ ಜೈನ್, ಸುವರ್ಣ ಪ್ರತಿಷ್ಠಾನ ಬೆಳ್ತಂಗಡಿ ಸಂಚಾಲಕ ಸಂಪತ್ ಸುವರ್ಣ, ಬಂಟ್ವಾಳ ತಾ.ಪಂ. ಸ್ಥಾಯಿಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ತಾ.ಪಂ.ಸದಸ್ಯೆ ಸ್ವಪ್ನಾ ವಿಶ್ವನಾಥ, ನಿವೃತ್ತ ಬ್ಯಾಂಕ್ ಅ„ಕಾರಿ ಬೇಬಿ ಕುಂದರ್, ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕ ಪ್ರಶಾಂತ್ ಪುಂಜಾಲಕಟ್ಟೆ,, ಕಳಸ ಜಿ.ಪಂ.ಸದಸ್ಯ ಪ್ರಭಾಕರ ಗೌಡ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ. ಪದ್ಮಶೇಖರ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿ ಉಪಾಧ್ಯಕ್ಷ ಕೆ.ಮೋನಪ್ಪ ಪೂಜಾರಿ ಕಂಡೆತ್ಯಾರು ಸ್ವಾಗತಿಸಿದರು, ರಾಜೀವ ಕಕ್ಯಪದವು ವಂದಿಸಿದರು. ಉಪನ್ಯಾಸಕ ಶಿವರಾಜ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *