ಬಂಟ್ವಾಳ; ಇಂದಿನ ಆಧುನಿಕ ಜಗತ್ತಿನಲ್ಲಿ ರಕ್ತದ ಅಗತ್ಯತೆ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ರಕ್ತದ ಅಗತ್ಯತೆ ಯಾವ ವ್ಯಕ್ತಿಗೂ ಯಾವುದೇ ಸಂದರ್ಭದಲ್ಲಿ ಬಂದೋಗಬಹುದು, ಸಮಾಜ ಮುಖಿ ಕಾರ್ಯಗಳಿಂದ ರಚನಾತ್ಮಕ ಸಮಾಜ ನಿರ್ಮಾಣ ಸಾಧ್ಯ ಎಂದು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಡಾ.ದುರ್ಗಾಪ್ರಸಾದ್ ಎಂ.ಆರ್ ಹೇಳಿದರು. ವಾಮದಪದವು ಹಾಗೂ ಮಂಗಳೂರು ಲೇಡಿಗೋಷನ್ ಆಸ್ಪತ್ರೆಯ ರಕ್ತನಿಧಿ ಕೇಂದ್ರ ವತಿಯಿಂದ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಾಮದಪದವು ಪದವಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ರೋವರ್‍ಸ್ -ರೇಂಜರ್‍ಸ್ ಘಟಕ ಹಾಗೂ ರೆಡ್ ರಿಬ್ಬನ್ ಘಟಕಗಳ ಕಾರ್ಯ ಶ್ಲಾಘಾನೀಯ ಎಂದು ಸ.ಪ.ದ.ಕಾಲೇಜು . ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ರಕ್ತನಿಧಿ ಕೇಂದ್ರ, ಲೇಡಿಗೋಶನ್ ಆಸ್ಪತ್ರೆಯ ಮುಖ್ಯಸ್ಥ ಎಡ್ವರ್ಡ್‌ವಾಸ್ರು ಹೇಳಿದರು. ಕಾಲೇಜಿನ . ಪ್ರಾಂಶುಪಾಲರಾದ ಪ್ರೊ. ಹರಿಪ್ರಸಾದ್ ಬಿ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಅಧಿಕಾರಿ ಡಾ.ರವಿ ಎಂ.ಎನ್. ಮತ್ತು ಪ್ರೊ.ರೊನಾಲ್ಡ್ ಪ್ರವೀಣ್ ಕೊರೆಯ,ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಮೇರಿ ಎಂ.ಜೆ. ರೇಂಜರ್ ಲೀಡರ್ ಪ್ರೊ.ಉಷಾ. ಬಿ. ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪವಿತ್ರ ನಿರೂಪಿಸಿ, ಶ್ವೇತಾ ನಾಯಕ್ ಸ್ವಾಗತಿಸಿ, ಶ್ವೇತಾ ವಂದಿಸಿದರು. ಒಟ್ಟು ೪೩ ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.