ಬಂಟ್ವಾಳ: ಪುದು ಗ್ರಾಮದ ಸುಜೀರು ಶ್ರೀ ವೀರ ಹನುಮಾನ್ ಮಂದಿರ ಇದರ ವತಿಯಿಂದ ಹತ್ತನೆ ವರ್ಷದ ಪುಸ್ತಕ ಉಚಿತ ವಿತರಣ ಕಾರ್ಯಕ್ರಮ ಭಾನುವಾರ ಸಂಜೆ ಮಂದಿರದ ಆವರಣದಲ್ಲಿ ನಡೆಯಿತು.
ಗೌರವಾಧ್ಯಕ್ಷ ಅರುಣ್ ಕುಮಾರ್ ನುಲಿಯಾಲು ಗುತ್ತು ಅವರು ಪುಸ್ತಕಗಳನ್ನು ವಿತರಿಸಿ ಮಾತನಾಡಿ ಪುಸ್ತಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಪಡೆಯಬೇಕು ಎಂದರು.

BTW_MAY20_4ಗೌರವ ಸಲಹೆಗಾರ ದಿನೇಶ್ ಶೆಟ್ಟಿ ಕೊಟ್ಟಿಂಜ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಅರುಣ್ ಕುಮಾರ್ ನುಲಿಯಾಲುಗುತ್ತು ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡುತ್ತಿದ್ದಾರೆ. ಇದು ಮಾದರಿ ಕಾರ್ಯ ಹಾಗೂ ಅಭಿನಂದನೀಯ ಎಂದರು. ಸದಸ್ಯ ಸಂಜೀವ, ಮಂದಿರದ ಪ್ರಧಾನ ಅರ್ಚಕ ಗೋಪಾಲ ಕುಲಾಲ್, ಉತ್ಸವ ಸಮಿತಿ ಅಧ್ಯಕ್ಷ ರಕ್ಷಿತ್
ಮಹಿಳಾ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಮೊದಲಾದವರು ಹಾಜರಿದ್ದರು.
60 ಮಂದಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಗಣೇಶ್ ದತ್ತನಗರ ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *