ಬಂಟ್ವಾಳ : ಯಕ್ಷಗಾನ ಬಯಲಾಟ ಸಮಿತಿ ಅಲೆತ್ತೂರು ಇವರ ವತಿಯಿಂದ ಅಲೆತ್ತೂರು ಶ್ರೀ ಪಂಜುರ್ಲಿ ದೈವದ ಬಾಕಿಮಾರು ಗದ್ದೆಯಲ್ಲಿ ಜರಗಿದ ೮ನೇ ವರ್ಷದ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮದಲ್ಲಿ ಪ್ರಸ್ತುತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ತಾಲೂಕಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ರಾಜ್ಯದಲ್ಲಿ ೨ನೇ ಸ್ಥಾನ ಪಡೆದ ಕುಮಾರಿ ಅನುಪಮಾ ಕಾಮತ್ , ಲಕ್ಷ್ಮಿ ಗಟ್ಟಿ, ಶ್ರೀ ನಿಧಿ ಪೈ, ವೃಕ್ಷಿತಾ, ವೀಕ್ಷಿತಾ, ದೀಪಿಕಾ , ಶಿಯಾ ಶಾಲ್ಮಲಿ, ಚೈತ್ರಾ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಉದ್ಯಮಿಗಳಾದ ಕಿರಣ್ ಕುಮಾರ್ ಬೆಂಗಳೂರು, ವೆಂಕಟೇಶ್ ಬೆಂಗಳೂರು, ಜಯಪ್ರಕಾಶ್ ಜಕ್ರಿಬೆಟ್ಟು, ರಾಜೇಶ್ ಸುವರ್ಣ, ಸಮಿತಿ ಅಧ್ಯಕ್ಷ ಮೋನಪ್ಪ ಪೂಜಾರಿ, ಲೋಕೇಶ್ ಸುವರ್ಣ, ಹಿಮಾಕರ್, ದಿನೇಶ್ ಸುವರ್ಣ, ತಾರನಾಥ್, ಪ್ರಶಾಂತ್, ಸುರೇಶ್ ಆಚಾರ್ಯ ಉಪಸ್ಥಿತರಿದ್ದರು.
ಬಳಿಕ ಸುಂಕದಕಟ್ಟೆೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ನಡೆಯಿತು.
