ಬಂಟ್ವಾಳ: ರಮ್ಜಾನ್ ತಿಂಗಳಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಅಸಮರ್ಪಕ ವಿದ್ಯುತ್ ಕಡಿತಗೊಳಿಸುವುದನ್ನು ವಿರೋಧಿಸಿ ಬಂಟ್ವಾಳ ಕ್ಷೇತ್ರದ ಯುವ ಜನತಾದಳದ ನಗರಾಧ್ಯಕ್ಷ ಮಹಮ್ಮದ್ ನವಾಜ್ ಅವರು ತಾಲೂಕು ಮೆಸ್ಕಾಂ ಜೂನಿಯರ್ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ರಮ್ಜಾನ್ ತಿಂಗಳ ಮುಂಜಾನೆ ಹಾಗೂ ಸಂಜೆಯವೇಳೆಗೆ ಅವ್ಯಾಹತವಾಗಿ ಪವರ್ ಕಟ್ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತಿದೆ.ಈ ಬಗ್ಗೆ ಮೆಸ್ಕಾಂ ಗೆ ಈಗಾಗಲೇ ಮೌಖಿಕವಾಗಿ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಜನತೆ ಬೀದಿಗೀಳಿದು ಹೋರಾಟ ಮಾಡುವುದಕ್ಕೆ ಅವಕಾಶ ನೀಡದೆ.ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
