ಬಂಟ್ವಾಳ: ಖಾಸಗಿಬಸ್ ಮಾಲಕ, ಕಾಂಗ್ರೇಸ್ ಕಾರ್ಯಕರ್ತ, ಬಂಟ್ವಾಳ ಪರಸಭಾ ಮಾಜಿ ನಾಮನಿರ್ದೇಶನ ಸದಸ್ಯ ನೋರ್ಬಟ್ ರೋಡ್ರಿಗಸ್ ನಿ( 52) ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ಗುರುವಾರ ನಿಧನರಾಗಿದ್ದಾರೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಕಮಲ್ ಕಟ್ಟೆನಿವಾಸಿ ನೊರ್ಬಟ್ ರೋಡ್ರಿಗಸ್ ಗೆ ಬುಧವಾರ ಸಂಜೆ ದಿಢೀರ್ ಅಸೌಖ್ಯ ಕಾಣಿಸಿಕೊಂಡು ಆರೋಗ್ಯ ದಲ್ಲಿ ಏರುಪೇರು ಉಂಟಾದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ
ಬಿ.ಸಿ.ರೋಡಿನಲ್ಲಿ ಖಾಸಗಿ ಬಸ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಸ್ನೇಹಿತರ ವಲಯದಲ್ಲಿ ಮುನ್ನ ಎಂದೆ ಚಿರಪರಿಚಿತರು, ಪ್ರಸ್ತುತ ನಿತ್ಯಾಧರ ಎಂಬ ಹೆಸರಿನ ಬಸ್ ನಮಾಲಕರಾಗಿದ್ದು,ಸಾಮಾಜಿಕ ಕಾರ್ಯಕರ್ತರು ಆಗಿದ್ದು,ಬಿ.ಸಿ.ರೋಡಿನಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕರ ಸಂಘದ ಸ್ಥಾಪಕರಲ್ಲೊಬ್ಬರು ಆಗಿದ್ದಾರೆ.
ಕಾಂಗ್ರೇಸ್ ಸಕ್ರೀಯ ಕಾರ್ಯಕರ್ತರಾಗಿದ್ದ ಇವರು ಕಳೆದ ಅವಧಿಯಲ್ಲಿ ಪುರಸಭೆಯ ನಾಮನಿರ್ದೇಶನ ಸದಸ್ಯ ರಾಗಿಯೂ ಸೇವೆ ಸಲ್ಲಿಸಿದ್ದು.ಇದಕ್ಕು ಮೊದಲು ಪುರಸಭಾ ಚುನಾವಣೆಯಲ್ಲಿ ವಾಡ್೯4 ರಲ್ಲಿ ಸ್ಪರ್ಧೆ ಸಿ ಪರಾಭವಗೊಂಡಿದ್ದರು.
ವರು ಪತ್ನಿ ಬಬಿತಾ ಹಾಗೂ ಒರ್ವ ಪುತ್ರ ಮತ್ತು ಒರ್ವ ಪುತ್ರಿಯ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಾಂತ್ವಾನ:
ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿಕುಂದರ್, ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ಮಾಜಿ ಬ್ಲಾಕ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್,ಬೂಡಾ ಅಧ್ಯಕ್ಷ ಸದಾಶಿವ ಬಂಗೇರ ಮತ್ತಿತರರು ಆಸ್ಪತ್ರೆ ಗೆ ಬೇಟಿ ನೀಡಿ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

