ಬಂಟ್ವಾಳ : ಬಸವಣ್ಣನ ಚಿಂತನೆ ಸಾರ್ವಕಾಲಿಕವಾದುದು ಕ್ರಾಂತಿಯೋಗಿ ಬಸವಣ್ಣ 12ನೇ ಶತಮಾನದಲ್ಲಿ ಸಮಾಜದ ಸಮಾನತೆಗಾಗಿ ಶ್ರಮಿಸಿದವರು . ಕಾಯಕ ತತ್ವದ ಪ್ರತಿಪಾದಕರಾಗಿ ಧ್ಯೇಯವೇ ದೇಗುಲ ವೆಂದು ಸಾರಿ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು ಎಂದು ಬಂಟ್ವಾಳ ತಹಶೀಲ್ದಾರ್ ಸಣ್ಣರಂಗಯ್ಯ ಹೇಳಿದರು.

KAR_0310
ರಾಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿ ವತಿಯಿಂದ ಬಂ.ಮಿನಿವಿಧಾನಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಬಸವಣ್ಣ ಜಯಂತಿ ಆಚರಣೆ ಯ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ರಾಜೇಶ್ ನಾಯ್ಕ್ , ಆಹಾರ ಶಾಖೆಯ ಶ್ರೀನಿವಾಸ್ , ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ತಾಲೂಕು ರಾ ಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ತಾಲೂಕು ಕಛೇರಿ ಸಿಬ್ಬಂದಿ ವರ್ಗ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಸಾರ್ವಜನಿಕರು ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ಸ್ವಾಗತಿಸಿ ವಂದಿಸಿದರು.

KAR_0316

By suddi9

Leave a Reply

Your email address will not be published. Required fields are marked *