ಮೂಡುಬಿದಿರೆ: ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ನಾಗದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ದೇವರಿಗೆ ಗಣಹೋಮ, ಕ್ಷೇತ್ರದಲ್ಲಿ ನವಕ ಹೋಮ, ವಾಯುಸ್ತುತಿ ಪುನಶ್ಚರಣ ಸಾನಿಧ್ಯ ಕಲಶಾಭಿಷೇಕ ಹಾಗೂ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ದುರ್ಗಾಪೂಜೆ, ಪಾಲಕಿ ಉತ್ಸವ, ನಂತರ ಮಹಾಪೂಜೆ ಜರಗಿತು. ಬಳಿಕ ಹೆಗ್ಡೆ ಸಮಾಜ ಬಾಂಧವರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವರು. ಸಾಮೂಹಿಕ ಸತ್ಯನಾರಾಯಣ ಪೂಜೆ, ಭಜನಾ ಕಾರ್ಯಕ್ರಮ ನಂತರ ವಿಶೇಷ ರಂಗಪೂಜೆ, ಬಲಿ ಉತ್ಸವ ನಡೆಯಿತು. ಬ್ರಹ್ಮಶ್ರೀ ಎಡಪದವು ಶ್ರೀ ವೆಂಕಟೇಶ ತಂತ್ರಿಗಳ ನೇತ್ರತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ದತ್ತಾತ್ರೇಯ ಭಟ್ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು.

 

Kotebagilu
ವೇಣೂರು ಪರಾರಿ ದಿವಂಗತ ಗುಣಾನಂದ ಹೆಗ್ಡೆ ಸ್ಮರಣಾರ್ಥ ಪತ್ನಿ ಮತ್ತು ಮಗಳ ಸೇವಾರ್ಥವಾಗಿ ನಿರ್ಮಾಣಗೊಂಡ ದೇವಳದ ಕಚೇರಿಯನ್ನು ಹಾಗೂ ಮೂಡುಬಿದಿರೆಯ ಸಾಯಿ ಅನುರಾಮದ ದಿವಂಗತ ರುಕ್ಮಯ್ಯ ಹೆಗ್ಡೆ ಮತ್ತು ಅಪ್ಪಿ ಹೆಗ್ಡೆ ಸ್ಮರಣಾರ್ಥ ಮಕ್ಕಳು ಹಾಗೂ ಪಿಲಕುಂಜ ದಿವಂಗತ ಅಣ್ಣಯ್ಯ ಹೆಗ್ಡೆ ಮತ್ತು ಗುಲಾಬಿ ಹೆಗ್ಡೆ ದಂಪತಿ ಸ್ಮರಣಾರ್ಥ ಅವರ ಮಕ್ಕಳು ಕೊಡುಗೆಯಾಗಿ ನೀಡಿದ ನೂತನ ಜನರೇಟರನ್ನು ದೇವಸ್ಥಾನದ ಸೇವೆಗೆ ಸಮರ್ಪಿಸಲಾಯಿತು.
ದೇವಸ್ಥಾದ ಆಡಳಿತ ಮೊಕ್ತೇಸರ ಕೆ. ಶ್ಯಾಮ ಹೆಗ್ಡೆ, ಕಾರ್ಯದರ್ಶಿ ಶೇಖರ್ ಹೆಗ್ಡೆ, ಮಾಜಿ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಕಾರ್ಯದರ್ಶಿ ಪ್ರಣಿಲ್ ಹೆಗ್ಡೆ, ಮಾಜಿ ಅಧ್ಯಕ್ಷ ಉದಯ ಹೆಗ್ಡೆ, ಮಹಿಳಾ ಸಂಘದ ಅಧ್ಯಕ್ಷೆ ಪೂರ್ಣಿಮಾ ಎಂ. ಹೆಗ್ಡೆ, ಕಾರ್ಯದರ್ಶಿ ಉಷಾ ಕೆ. ಹೆಗ್ಡೆ, ಮುಂಬೈ ಹೆಗ್ಡೆ ಸಂಘದ ಅಧ್ಯಕ್ಷ ವಿಜಯ್ ಬಿ. ಹೆಗ್ಡೆ, ಡಾ. ಸುರೇಂದ್ರ ಕುಮಾರ್ ಹೆಗ್ಡೆ ಮುಂಬೈ, ಬೆಂಗಳೂರು ಹೆಗ್ಡೆ ಸಂಘದ ಉಪಾಧ್ಯಕ್ಷ ಸದಾಶಿವ ಹೆಗ್ಡೆ ದಾನಿಗಳಾದ ರಾಮಚಂದ್ರ ಹೆಗ್ಡೆ, ಪ್ರಭಾಕರ ಹೆಗ್ಡೆ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *