ಮೂಡುಬಿದಿರೆ: ಜಗತ್ತು ನಾಲ್ಕನೇ ಕೈಗಾರಿಕ್ರಾಂತಿಯಲ್ಲಿದ್ದು ಆಟೊಮಿಷಿನ್ ಯುಗದಲ್ಲಿದ್ದೇವೆ . ಸಾಂಪ್ರದಾಯಕ ಕಲಿಕೆಗೆ ಮೀಸಲಾಗದೆ ಅಂತರ್ವಿಭಾಗಿಯ ವಿಷಯಗಳಾದ ಐಟಿಒ, ಎಐ, ಕ್ಲೌಡ್ ಕಂಪ್ಯೂಟಿಂಗ್ ಇತ್ಯಾದಿ ಕಲಿಕೆಯ ಕಡೆಗೆ ಮುಖ ಮಾಡಬೇಕಾಗಿದೆ ಎಂದು ಎ.ಎಂ.ಖಾನ್ ಹೇಳಿದರು.

YITE
ತೋಡಾರಿನಲ್ಲಿರುವ ಯೆನೆಪೋಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ನಡೆದ ಇಲೆಕ್ಟ್ರಿಕಲ್ ಸೈನ್ಸ್ ಮತ್ತು ಇನ್‍ಫೋರ್ಮೇಶನ್ ಮತ್ತು ಟೆಕ್ನಾಲಜಿಯಲ್ಲಿ ಇತ್ತೀಚಿನ ಆಶಯಗಳು ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಸುಧಾರಣೆಗಳು ಎಂಬ ವಿಷಯಗಳ ಕುರಿತು ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ ಆರ್. ವಿ. ಡಿ’ಸೋಜ ವಹಿಸಿದ್ದರು.
ಸಂಸ್ಥೆಯ ಅಬ್ದುಲ್ಲಾ ಜಾವೇದ್ ಮಾತನಾಡಿ ಸಂಸ್ಥೆ ಇಂತಹ ಅನೇಕ ಅವಕಾಶಗಳನ್ನು ನೀಡುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಡಾ. ಸತೀಶ್ ಎನ್, ಡಾ. ಜೀವನ್ ಪಿಂಟೋ ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ವಿಜಯ್ ಕುಮಾರ್ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *