ಮೂಡುಬಿದಿರೆ : ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ಇದರ ವತಿಯಿಂದ ರಂಜಾನ್ ಪ್ರಯುಕ್ತ ಆರ್ಥಿಕವಾಗಿ ತೀರಾ ಹಿಂದುಳಿದ ಮತ್ತುಝಖಾತಿಗೆ ಅರ್ಹರಾದ ಆಯ್ದ ಮುಸ್ಲಿಂ 165 ಬಡ ಕುಟುಂಬಗಳಿಗೆ ಶನಿವಾರ ಸಮಾಜ ಮಂದಿರದಲ್ಲಿ ರಂಜಾನ್ ಕಿಟ್‍ಗಳನ್ನು ವಿತರಿಸಲಾಯಿತು.

ಹಂಡೇಲು ಎಂ.ಜೆ.ಎಂ ಖತೀಬರಾದ ಹನೀಫ್ ಫೈಝಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಮೀಯ್ಯತುಲ್ ಫಲಾಹ್ ಸಂಘಟನೆಯು ಕಳೆದ ಮೂವತ್ತು ವರ್ಷಗಳಿಂದ ಸಾಮಾಜಿಕ ಹಾಗೂ ಶೈಕ್ಷಣಿಕದ ಜೊತೆಗೆ ಬಡವರ ಕಣ್ಣೀರೊರೆಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಪತ್ರಕರ್ತ ಅಶ್ರಫ್ ವಾಲ್ಪಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಜಮೀಯ್ಯತುಲ್ ಫಲಾಹ್‍ನ ದ.ಕ, ಉಡುಪಿ ಇದರ ಕಾರ್ಯದರ್ಶಿ ಸಲೀಂ ಹಂಡೇಲು ಅಧ್ಯಕ್ಷತೆ ವಹಿಸಿದ್ದರು.
ಶೇಖ್ ಅರ್ಷದ್, ಸಿ.ಎಚ್ ಗಫೂರ್, ಅಸ್ದುಲ್ಲಾ ಇಸ್ಮಾಯಿಲ್ ಹಾಗೂ ರಶೀದ್ ಬೆಳುವಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
