ಸುದ್ದಿ9 ಮಂಗಳೂರು, ಸೆ.18-ಹುಟ್ಟು ಹಾಗೂ ಸಾವನ್ನು ಸಮಾನವಾಗಿ ಸ್ವೀಕರಿಸಿಕೊಂಡು ಜೀವಿಸುವ ನಾಗರಿಕರು ತಾವು ಜೀವನದಲ್ಲಿದ್ದಾಗ ಸ್ಪಂದಿಸುವ ಮನೋಭಾವನೆ ಇರುತ್ತದೆಯೋ ಸತ್ತಾಗಲು ಈ ಭಾವನೆ ಉಳಿಸಿಕೊಳ್ಳಬೇಕು ಎಂಬ ಮಾತಿಗೆ ವಿಶ್ವದೆಲ್ಲೆಡೆ ಕರಾವಳಿಗರು ಸಜ್ಜನಿಗರು ಎಂಬುದು ಪ್ರತೀತಿ. ಇಲ್ಲಿನ ಪೊಲೀಸರು ಅಷ್ಟೇ ಸ್ನೇಹಜೀವಿಗಳು, ಮಾನವತಾವಾದಿಗಳು ಎಂಬುದನ್ನು ಮಂಗಳೂರಿನ ಹೆಡ್ ಕಾನ್ಸ್ಟೆಬಲ್ ವೊಬ್ಬರು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ನಿನ್ನೆ ರಸ್ತೆ ಅಪಘಾತದಲ್ಲಿ ಮೃತರಾಗಿ ದುರಂತ ಸಾವು ಕಂಡರೂ ತಮ್ಮ ದೇಹದ ಅಂಗಾಂಗ ದಾನ ಮಾಡುವ ಮೂಲಕ ಭಾಸ್ಕರ್ ಎಂಬ ಸಾಮಾನ್ಯ ಜೀವಿ ಅಸಮಾನ್ಯತೆಯನ್ನು ತೋರಿರುವುದರಿಂದ ಕರಾವಳಿ ಜನರ ಹೆಮ್ಮೆಗೆ ಪಾತ್ರಾಗಿದ್ದಾರೆ.
ಈ ಭಾಸ್ಕರ್ ವೃತ್ತಿಯಲ್ಲಿ ಮಂಗಳೂರಿನ ಟ್ರಾಫಿಕ್ ಪೂರ್ವ ಠಾಣೆಯ ಹೆಡ್ಕಾನ್ಸ್ಟೇಬಲ್. ಪ್ರವೃತ್ತಿಯಲ್ಲಿ ಸದಾ ಸ್ನೇಹ ಜೀವಿ ಈಗ ತನ್ನ ದುರಂತದ ಸಾವಿನಲ್ಲೂ ಮಾನವತಾವಾದವನ್ನು ಮೆರೆದು ಎರಡು ಜನರಿಗೆ ಕಣ್ಣಿನ ಮೂಲಕ ಬಾಳಿಗೆ ಬೆಳಕಾದರೆ, ಇನ್ನಿಬ್ಬರಿಗೆ ತನ್ನ ಕಿಡ್ನಿಯನ್ನು ದಾನ ಮಾಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟರೂ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಭಾಸ್ಕರ್ ನಾಡಿಗೇ ಮಾದರಿಯಾಗಿದ್ದಾರೆ. ಮಂಗಳೂರಿನ ಪಂಪ್ವೆಲ್ ವೃತ್ತದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಟ್ರಾಫಿಕ್ ಕಾನ್ಸ್ಟೆಬಲ್ ಭಾಸ್ಕರ್ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಇಚ್ಚೆಯಂತೆ ಕಣ್ಣು ಮತ್ತು ಕಿಡ್ನಿಗಳನ್ನು ದಾನಮಾಡಲಾಗಿದೆ.
ಸರಳ ಹಾಗೂ ಸೌಜನ್ಯದ ಮೂರ್ತಿಯಾಗಿದ್ದ ಭಾಸ್ಕರ್ ತಮ್ಮ ಉತ್ತಮ ಸೇವೆ ಮತ್ತು ಕರ್ತವ್ಯದಿಂದ ಇಲಾಖೆ ಮತ್ತು ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ದುರಂತದ ಸಾವು ಕಂಡರೂ ತಮ್ಮ ಅಂತ್ಯದಲ್ಲಿ ಅಂಗಾಂಗ ದಾನ ಮಾಡುವ ಮೂಲಕ ಎರಡು ಜೀವಗಳ ಬಾಳಿಗೆ ಆಸರೆ ಆಗಿದ್ದಾರೆ.
ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಮಾಜಿ ಕಾರ್ಪೋರೇಟರ್ ಪದ್ಮನಾಭ.
ಮೃತ ಭಾಸ್ಕರ್ ಅವರ ಪತ್ನಿಯ ಸಹೋದರ ಭಾಸ್ಕರ್ ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ 48 ವರ್ಷದ ಭಾಸ್ಕರ್ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದು, ಅವರ ದೇಹದಾನದ ಪ್ರಕ್ರಿಯೆಯನ್ನು ಕೆಎಂಸಿ ವೈದ್ಯರು ಪೂರೈಸಿದರು. ಈ ದಾನದಿಂದ ಒಟ್ಟು ನಾಲ್ಕು ಜೀವಗಳನ್ನು ಉಳಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.
ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಕರ್ತವ್ಯಕ್ಕೆ ಹಾಜರಾದ ಸಂದರ್ಭದಲ್ಲಿ ಮಾರುತಿ ಕಾರು ಡಿಕ್ಕಿಯಾದ ಪರಿಣಾಮ ಅವರು ಮೃತಪಟ್ಟಿದ್ದರು. ಘಟನೆಯಲ್ಲಿ ಅಶ್ವಿನಿ ಶೆಟ್ಟಿ ಎಂಬ ಇನ್ನೊಬ್ಬ ಪೇದೆ ಕೂಡ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಭಾಸ್ಕರ್ ಸಾವಿನಿಂದ ಪತ್ನಿಗೆ ಆಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. 12ರ ಹರೆಯದ ಹೆಣ್ಣು ಮಗಳನ್ನು ಹೊಂದಿರುವ ಸ್ನೇಹಜೀವಿ ಭಾಸ್ಕರ್ ತಮ್ಮ ಸಾವಿನಲ್ಲೂ ಮಾನವೀಯ ಕಳಕಳಿಯಲ್ಲಿ ಮೆರೆದಿದ್ದಾರೆ.

Bhaskar Police.jpg

 

By Suddi9

Leave a Reply

Your email address will not be published. Required fields are marked *