ಬಂಟ್ವಾಳ:  ಕ್ಷೇತ್ರದ ಅಭಿವೃದ್ದಿ ಹಾಗೂ ಸಮಸ್ಯೆಗಳ ಪರಿಹಾರದಲ್ಲಿ ಮತದಾರರು ತನ್ನೊಂದಿಗೆ ಕೈ ಜೋಡಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಿಳಿಸಿದ್ದಾರೆ.ಬಿಜೆಪಿ ಕನ್ಯಾನ ಗ್ರಾಮಪಂಚಾಯತ್ ಸಮಿತಿಯ  ಕಾರ್ಯಕರ್ತರ ಸಭೆಯಲ್ಲಿ ಭಾವಹಿಸಿ ಮಾತನಾಡಿದ ಶಾಸಕರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಹರ್ನಿಶಿಯಾಗಿ ದುಡಿದ  ದುಡಿದ ಕಾರ್ಯಕರ್ತರು ,ಪೇಜ್ ಪ್ರಮುಖರಿಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಗ್ರಾಮದ   ಅಭಿವೃದ್ಧಿಗೆ ಸಂಬಂಧಿಸಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು.
IMG-20190501-WA0109
ಮುಂದಿನ ದಿನಗಳಲ್ಲಿಯೂ ಕನ್ಯಾನ ಪರಿಸರದಲ್ಲಿ  ಪಕ್ಷವನ್ನು    ಸಂಘಟನಾತ್ಮಕ ಬೆಳೆಸುವ ನಿಟ್ಟಿನಲ್ಲಿ  ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು  ಎಂದ ಶಾಸಕರು ಪಕ್ಷದ     ಪೇಜ್ ಪ್ರಮುಖರು ಚುನಾವಣೆಯ ನಂತರವು ಸಕ್ರಿಯವಾಗಿದ್ದು ಮತದಾರರ ಸಮಸ್ಯೆಗಳನ್ನು ಅಲಿಸಿ ಪರಿಹರಿಸುವಲ್ಲಿ ಮುಂದಾಗಬೇಕು ಎಂದು ಕರೆ ನೀಡಿದರು.
IMG-20190501-WA0111ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ್, ಬಿಜೆಪಿ ಕ್ಷೇತ್ರಾಧ್ಯಕ್ಷರಾದ ಬಿ.ದೇವದಾಸ್ ಶೆಟ್ಟಿ, ಪ್ರ.ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ,ಮೋನಪ್ಪ ದೇವಸ್ಯ,ತಾ.ಪಂ ಸದಸ್ಯರಾದ ಕುಲ್ಯಾರ್ ನಾರಾಯಣ ಶೆಟ್ಟಿ, ಕಾರ್ಯದರ್ಶಿಗಳಾದ ರಮಾನಾಥ ರಾಯಿ,ಗಣೇಶ್ ರೈ ಮಾಣಿ, ಪ್ರಮುಖರಾದ ಬಾಲಕೃಷ್ಣ ಸೆರ್ಕಳ,ಅಭಿಷೇಕ್ ರೈ ಮಾಣಿ, ಉದಯರಮಣ ಭಟ್, ರಘುರಾಮ ಶೆಟ್ಟಿ ಕನ್ಯಾನ,ಶ್ರೀಮತಿ ಧರ್ಣಮ್ಮ,ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *