ಬಂಟ್ವಾಳ: ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಅನುಪಮ ಕಾಮತ್ ಅವರ ಕೈಕುಂಜೆಯ ನಿವಾಸಕ್ಕೆ ಶಾಸಕ ರಾಜೇಶ್ ನಾಯಕ್ ಅವರು ಭೇಟಿ ಅಭಿನಂದಿಸಿದರು. ಶಾಲು ಹಾಕಿ, ಹೂಗುಚ್ಛ ನೀಡಿ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿದ ಅವರು ಅನುಪಮ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದರು.

ಈ ಸಂದರ್ಭ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭಾ ಸದಸ್ಯ ಗೋವಿಂದ ಪ್ರಭು, ಮಾಜಿ ಸದಸ್ಯೆ ಸುಗುಣ ಕಿಣಿ, ಪ್ರಮುಖರಾದ ರಮೇಶ್ ಸಾಲ್ಯಾನ್, ದುರ್ಗಾದಾಸ್ ಶೆಣೈ, ಮಧುಕರ ಮಲ್ಯ ಹಾಗೂ ಅನುಪಮ ಮಾತಪಿತರಾದ ಡಾ. ದಿನೇಶ್ ಕಾಮತ್ ಹಾಗೂ ಡಾ.ಅನುರಾಧ ಕಾಮತ್ ಉಪಸ್ಥಿತರಿದ್ದರು.
