ಮೂಡುಬಿದಿರೆ : ಮೂಡುಬಿದಿರೆ ಪ್ರೆಸ್‍ಕ್ಲಬ್ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವೇಣುಗೋಪಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಬಿ.ಕೆ ಅಶ್ರಫ್ ವಾಲ್ಪಾಡಿ, ಕಾರ್ಯದರ್ಶಿಯಾಗಿ ಯಶೋಧರ ವಿ.ಬಂಗೇರ ಕೋಶಾಧಿಕಾರಿಯಾಗಿ ಗಣೇಶ್ ಕಾಮತ್, ಸಂಘಟನಾ ಕಾರ್ಯದರ್ಶಿಯಾಗಿ ಶರತ್ ದೇವಾಡಿಗ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳಾಗಿ ಪ್ರಸನ್ನ ಹೆಗ್ಡೆ, ಸೀತಾರಾಮ ಆಚಾರ್ಯ, ಧನಂಜಯ ಮೂಡುಬಿದಿರೆ, ನವೀನ್ ಸಾಲ್ಯಾನ್, ಪ್ರೇಮಶ್ರೀ ಕಲ್ಲಬೆಟ್ಟು, ಜೈಸನ್ ತಾಕೋಡೆ, ರಾಘವೇಂದ್ರ ಶೆಟ್ಟಿ, ಪದ್ಮಶ್ರೀ ಭಟ್ ನಿಡ್ಡೋಡಿ, ದೀವಿತ್ ಎಸ್.ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ನಿರ್ಗಮಿತ ಅಧ್ಯಕ್ಷ ಜೈಸನ್ ತಾಕೋಡೆ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ವರ್ಷದ ಕ್ರೀಯಾಶೀಲ ಪತ್ರಕರ್ತನಾಗಿ ಯಶೋಧರ ವಿ. ಬಂಗೇರ ಅವರನ್ನು ಗುರುತಿಸಲಾಯಿತು.
