ಗುರುಪುರ : ಗುರುಪುರ ಬಂಟರ ಮಾತೃ ಸಂಘ(ರಿ) ಆಶ್ರಯದಲ್ಲಿ ಪರಿಸರದ ಎಲ್ಲ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮೇ 5ರಂದು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ವಾಮಂಜೂರು ಲಿಂಗಮಾರುಗುತ್ತು ಸುಬ್ಬಯ್ಯ ಶೆಟ್ಟಿ ಪ್ರಾಯೋಜಕತ್ವದಲ್ಲಿ ಸಾರ್ವಜನಿಕ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಲಿದೆ.

ಬೆಳಿಗ್ಗೆ 9ರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಆಯೋಜಿಸಲಾದ ಈ ಶಿಬಿರದಲ್ಲಿ ಎ ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ, ನಿಟ್ಟೆ ವಿಶ್ವವಿದ್ಯಾಲಯ ಮಂಗಳೂರು ಇದರ ಸಾರ್ವಜನಿಕ ದಂತ ವಿಭಾಗದ ನುರಿತ ದಂತ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.

ಈ ಸಂದರ್ಭದಲ್ಲಿ ಆಯೋಜಿಸಲಾದ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು(ಅಧ್ಯಕ್ಷ, ಗುರುಪುರ ಬಂಟರ ಮಾತೃ ಸಂಘ) ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮವನ್ನು ಲಿಂಗಮಾರುಗುತ್ತು ಸುಬ್ಬಯ್ಯ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಚಂದ್ರಹಾಸ ರೈ ವಾಮಂಜೂರು, ಸೀತಾರಾಮ ಶೆಟ್ಟಿ ಲಿಂಗಮಾರುಗುತ್ತು, ಪ್ರಮೋದ್ ರೈ ದೋಣಿಂಜೆಗುತ್ತು, ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು, ಹೇಮಂತ ಶೆಟ್ಟಿ ನಾರಳ, ಓಂಪ್ರಕಾಶ್ ಶೆಟ್ಟಿ(ಉದ್ಯಮಿ), ದಾಮೋದರ ಮೇಂಡ(ನಿವೃತ್ತ ಅಧ್ಯಾಪಕ), ವಿನಯಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ಚಂದ್ರಶೇಖರ ಶೆಟ್ಟಿ ಕೊಳಕೆಬೈಲು, ಸೋಹನ್ ಅಥಿಕಾರಿ, ಪ್ರವೀಣ್ ಆಳ್ವ, ಶ್ರೀಕರ ಶೆಟ್ಟಿ, ಉಮೇಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆಂದು ಸಂಘದ ಪ್ರಕಟಣೆ ತಿಳಿಸಿದೆ.

ಶಿಬಿರದಲ್ಲಿ ಚಿಕಿತ್ಸೆ :

* ಬಾಯಿ ಮತ್ತು ಹಲ್ಲುಗಳ ಆರೋಗ್ಯ ಶಿಕ್ಷಣ

* ಬಾಯಿ ಮತ್ತು ಹಲ್ಲುಗಳ ಆರೋಗ್ಯ ತಪಾಸಣೆ

* ರೋಗಗ್ರಸ್ತ ಹಲ್ಲುಗಳ ಕೀಳುವುದು

* ಹಲ್ಲುಗಳ ಶುಚಿಗೊಳಿಸುವುದು

* ಹುಳುಕು ಹಲ್ಲುಗಳ ಭರ್ತಿ ಮಾಡುವುದು

* ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆ

By suddi9

Leave a Reply

Your email address will not be published. Required fields are marked *