ಕೋಲಾರ:ಏ.25: ಆರ್.ಟಿ.ಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ಶ್ರೀನಿವಾಸಪುರ ತಾಲೂಕು ಪಂಚಾಯತಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ವ್ಯವಸ್ಥಾಪಕ ಆನಂದಾಚಾರಿಗೆ ರಾಜ್ಯ ಮಾಹಿತಿ ಹಕ್ಕು ಆಯೋಗ ಹತ್ತು ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದೆ.
ಆರ್.ಟಿ.ಐ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದ ಆನಂದಾಚಾರಿಗೆ ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ಸಂಬಂಧಿಸಿದಂತೆ ಸ್ಟಾಂಪ್ ಡ್ಯೂಟಿಗೆ ಸಂಬಂಧಿಸಿದಂತೆ ಶ್ರೀನಿವಾಸಪುರ ಆರ್.ಟಿ.ಐ ಮಾಹಿತಿ ಕಾರ್ಯಕರ್ತ ಶಬ್ಬೀರ್ ಅಹಮದ್ ಸುಮಾರು 3 ವರ್ಷಗಳ ಹಿಂದೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದರು.
ಆದರೆ ಶ್ರೀನಿವಾಸಪುರ ತಾಲೂಕು ಪಂಚಾಯತಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ವ್ಯವಸ್ಥಾಪಕ ಆನಂದಾಚಾರಿ ಈ ಅರ್ಜಿಯನ್ನು ನಿರ್ಲಕ್ಷ್ಯಿಸಿದ್ದರು. ಈ ಕುರಿತು ಶಬ್ಬೀರ್ ಅಹಮದ್ ಮೇಲ್ಮನವಿ ಪ್ರಾಧಿಕಾರಕ್ಕೂ ಅರ್ಜಿಯನ್ನು ಸಲ್ಲಿಸಿದ್ದರು. ಮೇಲ್ಮನವಿ ಪ್ರಾಧಿಕಾರವು ಅರ್ಜಿದಾರರು ಕೇಳಿರುವ ಮಾಹಿತಿಯನ್ನು ನೀಡುವಂತೆ ಸೂಚಿಸಿತ್ತು. ಆದರೆ ಆನಂದಾಚಾರಿ ಆದೇಶವನ್ನು ಪಾಲಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ಲಭ್ಯ ಇದ್ದ ಮಾಹಿತಿ ನೀಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಪ್ರತಿವಾದಿಯು ಉದ್ದೇಶಪೂರ್ವಕವಾಗಿ ಅರ್ಜಿದಾರರಿಗೆ ಮಾಹಿತಿ ಒದಗಿಸಿರುವುದಿಲ್ಲವೆಂದು ಪರಿಗಣಿಸಿ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 20(1)ರನ್ವಯ ತನಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪ್ರತಿವದಿಯಾದ ಆನಂದಚಾರಿಯವರಿಗೆ 10 ಸಾವಿರ ರೂ ದಂಡವನ್ನು ವಿಧಿಸಿದೆ. ವಿಧಿಸಿರುವ ದಂಡದ ಮೊತ್ತವನ್ನು ಏಕ ಕಂತಿನಲ್ಲಿ ಅಥವಾ ಸದರಿಯವರ ಮುಂದಿನ ತಿಂಗಳುಗಳಲ್ಲಿ ಸಂಬಳವನ್ನು ಪಾವತಿಸುವ ಸಂದರ್ಭದಲ್ಲಿ ಪ್ರತಿ ಮಾಹೆ ರೂ 5000 ಗಳ ಒಟ್ಟು ಮೊತ್ತ 10000 ಸಾವಿರ ರೂಗಳನ್ನು ಕಡಿತಗೊಳಿಸಿ ಈ ದಂಡ ಮೊತ್ತ ಸರ್ಕಾರದ ಲೆಕ್ಕ ಶೀರ್ಷಿಕೆ EAD OF ACCOUNT 0070-60-118-0-01-000 PENALTIES UNDER THE ACT UNDER NEW MINOR RECEIPTS UNDER THE RTI ಖಾತೆಗೆ ಜಮಾ ಮಾಡಿ ಜಮಾ ಮಾಡಿದ ರಸೀದಿಯೊಂದಿಗೆ ವರದಿ ಸಲ್ಲಿಸಬೇಕೆಂದು ಮೇಲ್ಮನವಿ ಪ್ರಾಧಿಕಾರ ಆನಂದಚಾರಿ ಅವರಿಗೆ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ19(8)ರನ್ವಯ ನಿರ್ದೇಶಿಸಿದೆ. ಪಾವತಿಸಿದ ರಸೀದಿಯ ನಕಲು ಪ್ರತಿಯನ್ನು ಆಯೋಗಕ್ಕೆ ಸಲ್ಲಿಸಬೇಕೆಂದು ಆಯೋಗ ಆದೇಶದಲ್ಲಿ ಸೂಚಿಸಿ ವಿಚಾರಣೆ ಮುಂದುವರೆಸಿದೆ.
*
ಶಬ್ಬೀರ್ ಅಹಮದ್ 9886353626
