ಮೂಡುಬಿದಿರೆ: ಏ.29ರಂದು ಶ್ರೀಕ್ಷೇತ್ರ ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದದಲ್ಲಿ ಮಂಗಳವಾರ ವೈದಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

 

Iruvail Bramhakalasha (1)

Iruvail Bramhakalasha (2)

Iruvail Bramhakalasha (3)

Iruvail Bramhakalasha (4)
ಶಿಬರೂರು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಋತ್ವಿಜರ ಸ್ವಾಗತ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಪುಣ್ಯಾಹ, ನಾಂದಿ, ಬ್ರಹ್ಮಕೂರ್ಚ ಹೋಮ, ವೇದಪಾರಾಯಣ ಆರಂಭ, ಕಂಕಣಬಂಧ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಪೂವಪ್ಪ ಸಾಲ್ಯಾನ್, ಗೌರವಾಧ್ಯಕ್ಷ ಭುಜಂಗ ಆರ್.ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ ಪ್ರಭು ಪಂಜ, ಅಣ್ಣಿ ದೇವಾಡಿಗ, ರಮೇಶ್ ನಾಯ್ಕ್, ಸುಜಾತ ಜೆ.ಶೆಟ್ಟಿ, ಗೀತಾ ಜಯರಾಮ್ ಬಂಗೇರ, ಅರ್ಚಕವೃಂದ, ಗುತ್ತು ಬಾಳಿಕೆ ಮನೆತನದವರು ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *