ಕುಪ್ಪೆಪದವು:ಕುಳವೂರಿನ ದೂಮಾವತಿ ಕನಲ್ಲಾಯ ಯೂತ್ ಕ್ಲಬ್(ರಿ) ಇದರ ವತಿಯಿಂದ 7ನೇ ವರ್ಷದ ವಾರ್ಷಿಕೋತ್ಸವ ಇತ್ತೀಚೆಗೆ ಕುಳವೂರಿನ ತೆರೆಜಾಲಿನಲ್ಲಿ ಜರಗಿತು. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೆರೆಜಾಲು ದೊಂಪದ ಬಲಿ ಸಮಿತಿಯ ಅಧ್ಯಕ್ಷ ಕುಳವೂರು ಗುತ್ತು ಸದಾನಂದ ಶೆಟ್ಟಿಯವರು “ಯುವಕರು ಇಂತಹ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಸಹಬಾಗಿಗಳಾಗಬೇಕೆಂದು” ಹೇಳಿ ಸಂಸ್ಥೆಗೆ ಶುಭಹಾರೈಸಿದರು.
ಅನಾರೋಗ್ಯದಿಂದ ಮೃತಪಟ್ಟಿರುವ ಯುತ್ ಕ್ಲಬ್ ನ ಸದಸ್ಯರಾಗಿದ್ದ ಹೊನ್ನಯ್ಯ(ವಸಂತ)ಕುಳವೂರು ಇವರ ತಾಯಿ ಕಮಲ ಪೂಜಾರ್ತಿ ಯವರಿಗೆ ಕ್ಲಬ್ ನ ವತಿಯಿಂದ ಧನಸಹಾಯವನ್ನು ಹಸ್ತಾಂತರಿಸಲಾಯ್ತು, ಯೂತ್ ಕ್ಲಬ್ ನ ಅಧ್ಯಕ್ಷ ಸಂತೋಷ್ ಅಳೆಕಂಗಿನಡಿ ಅರಳ ಕನ್‍ಸ್ಟ್ರಕ್ಷನ್‍ನ ರಂಜನ್ ಅರಳ, ಮುತ್ತೂರು ಪಂಚಾಯತ್ ಸದಸ್ಯ ಪ್ರವೀಣ್ ಆಳ್ವ ಗುಂಡ್ಯ ಬಾಲಕೃಷ್ಣ, ಸೋಮಶೇಖರ, ಗಣೇಶ್ ಬಾಕಿಮಾರು, ಕರುಣಾಕರ ಭಂಡಾರಿ, ಲೋಕೇಶ್, ವಿಶ್ವನಾಥ್, ವಸಂತ ಕೊಟ್ಟಾರಿ, ಅಲ್ಲದೆ ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.ಸಬಾ ಕಾರ್ಯಕ್ರಮದ ನಂತರ ಕಿಶೋರ್.ಡಿ.ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಲ್ದ ಕಲಾವಿದೆರ್ ಇವರಿಂದ “ಮಂಗೆ ಮನ್ಪೊಚಿ” ಎಂಬ ತುಳು ಹಾಸ್ಯ ನಾಟಕ ಪ್ರದರ್ಶನ ನಡೆಯಿತು.
