ಮೈಸೂರು: ದಸರಾ ಮಹೋತ್ಸವ ಸಿದ್ಧತೆಯಲ್ಲಿರುವ ಅರಮನೆಯಲ್ಲೀಗ ಮತ್ತೊಂದು ಸೂತಕದ ಛಾಯೆ. ಮಂಗಳವಾರ ಮಧ್ಯಾಹ್ನ ಅರಮನೆ ಹೊರಾವರಣದ ಅರಳಿ ಮರ ಬಿದ್ದು ಕೋಟೆ ಮಾರಮ್ಮ ದೇವಸ್ಥಾನ ಸಂಪೂರ್ಣವಾಗಿ ಧ್ವಂಸವಾಗಿದೆ. ಇಬ್ಬರು ಮಹಿಳೆಯರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.
ಅಂಬಾವಿಲಾಸ ಅರಮನೆ ಕೋಟೆಯ ಹೊರಾವರಣದಲ್ಲಿರುವ ಬೃಹತ್ ಅರಳಿ ಮರದ ಅಡಿಯಲ್ಲಿ ಕೋಟೆ ಮಾರಮ್ಮ ದೇವಸ್ಥಾನ ಇದೆ. ಅರಳಿ ಮರ ಬೇರು ಸಮೇತ ಉರಳಿದ್ದರಿಂದ ದೇವಸ್ಥಾನವು ಧ್ವಂಸವಾಗಿದೆ. ಕೆ.ಆರ್ ಮೊಹಲ್ಲಾ ಸುಣ್ಣದಕೇರಿ ನಿವಾಸಿ ಹಾಗೂ ದೇವಸ್ಥಾನದ ಪೂಜರಿ ಸಿದ್ದರಾಜು ಎಂಬವರ ಪತ್ನಿ ಸುಶೀಲಮ್ಮ (65) ಮತ್ತು ರಮೇಶ್ ಎಂಬವರ ಪತ್ನಿ ಶೈಲಜಾ (35) ಮೃತಪಟ್ಟವರು. ಸುಣ್ಣದಕೇರಿ ಕಾಲಭೈರವ ಎಂಬವರ ಪತ್ನಿ ಮಂಜಳಾ (65), ಕಾಕರವಾಡಿ ಜಯರಾಮ ಎಂಬವರ ಪುತರ್ ರವಿಚಂದ್ರ (9) ಮತ್ತು ಬಸವೇಶ್ವರ ರಸ್ತೆ ನಿವಾಸಿ ವಿಜೇಂಗಂದ್ರ ಎಂಬುವರ ಪತ್ನಿ ಕನಕ (38) ಗಾಯಗೊಂಡಿದ್ದು, ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಮೃತರ ಕುಟುಂಬಕ್ಕೆ ತಲಾ ರು.1.50 ಲಕ್ಷ ಸರ್ಕಾರದ ವತಿಯಿಂದ ಪರಿಹಾರ ನೀಡಲಾಗುವುದು ಎಂದರು.