ಕಾರಿನಲ್ಲಿ ಸಾಗಿಸುತಿದ್ದ 1.25 ಲಕ್ಷ ರೂ ವಶ
ಕಾಪು: ಕಾರಿನಲ್ಲಿ ಸಾಗಿಸುತಿದ್ದ 1.25 ಲಕ್ಷ ರೂ. ನಗದನ್ನು ಚುನಾವಣಾ ಅಧಿಕಾರಿಗಳ ತಂಡ ಗುರುವಾರ ವಶಪಡಿಸಿಕೊಂಡಿದೆ. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಫ್ಲೈಯಿಂಗ್ ಸ್ಕ್ಯಾಡ್‍ನ ಅಧಿಕಾರಿ ರಾಘವ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಧರ್ಮಪ್ಪ ಮತ್ತು ಚಂದ್ರಶೇಖರ್ ಕಟಪಾಡಿ-ಶಿರ್ವ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತಿದ್ದರು.
ಈ ವೇಳೆ ಬೆಳ್ಮಣ್ ಜಂತ್ರದಲ್ಲಿರುವ ಗುಜರಿ ವ್ಯಾಪಾರ ನಡೆಸುತ್ತಿರುವ ಉದ್ಯಾವರ ನಿವಾಸಿ ಸುರೇಶ್ ಕೋಟ್ಯಾನ್ ಅವರು ತಮ್ಮ ಕಾರಿನಲ್ಲಿ ಹಣವನ್ನು ಕೊಂಡೊಯ್ಯುತಿದ್ದರು. ಕಾರಿನ ಡ್ಯಾಶ್ ಬೋರ್ಡ್‍ನಲ್ಲಿದ್ದ 2000, 500, 100, 50 ಮತ್ತು 10 ರೂ. ನೋಟುಗಳ ಬಂಡಲ್ ವಶಪಡಿಸಿಕೊಳ್ಳಲಾಗಿದೆ. ಸೂಕ್ತ ದಾಖಲೆಗಳು ದೊರಕದ ಹಿನ್ನೆಲೆಯಲ್ಲಿ ಕಾಪು ತಹಶೀಲ್ದಾರ್ ಸಮ್ಮುಖದಲ್ಲಿ ಹಾಜರುಪಡಿಸಲಾಗಿದೆ.