ಉಡುಪಿ: ಡಾ|| ಜಿ,ಶಂಕರ್ ಸರ್ಕಾರಿ ಮಹಿಳಾ ಪ್ರ.ದಕಾಲೇಜುಅಜ್ಜರಕಾಡುಉಡುಪಿ ಮತ್ತು ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಎ.4 ಗುರುವಾರಕಾಲೇಜಿನಆವರಣದಲ್ಲಿ ಬೃಹತ್ಆರೋಗ್ಯತಪಾಸಣಾ ಶಿಬಿರ ಮತ್ತು ಮಾಹಿತಿಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲೋಂಬಾರ್ಡ್ ಮೆಮೋರಿಯಲ್ (ಮಿಷನ್)ಆಸ್ಪತ್ರೆಇದರ ವೈದ್ಯಾಧಿಕಾರಿಡಾ|| ಗಣೇಶ್ಕಾಮತ್,ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಸೂಕ್ತ ನಿಯಮವನ್ನು ನಾವು ಜೀವನದಲ್ಲಿ ಪಾಲನೆ ಮಾಡಬೇಕು ಇಂದಿನ ಈ ಯುಗದಲ್ಲಿ ಹೆಚ್ಚಿನವರುತಮ್ಮಆರೋಗ್ಯ ಬಗ್ಗೆ ಕಾಳಜಿ ವಹಿಸದೆಇರುವುದು ಸರಿಯಲ್ಲ ಎಂದರು.
ಜೇಸಿಐ ವಲಯ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು,ವಿದ್ಯಾರ್ಥಿಗಳು ಪಾಠದೊಂದಿಗೆ ಸಮಾಜಮುಖಿಕಾರ್ಯದಲ್ಲಿತಮ್ಮನ್ನುತಾವು ತೊಡಗಿಸಿಕೊಳ್ಳಬೇಕು ಎಂದರು. ವೇದಿಕೆಯಲ್ಲಿಅದ್ಯಕ್ಷತೆಯನ್ನುಕಾಲೇಜಿನ ಪ್ರಾಂಶುಪಾಲ ಡಾ|| ಭಾಸ್ಕರ ಶೆಟ್ಟಿ ವಹಿಸಿದ್ದರು.ಯೂತ್ ರೆಡ್ಕ್ರಾಸ್ ಸಂಯೋಜಕಿ ಶೋಭಾ,ಜೇಸಿಅದ್ಯಕ್ಷಜಗದೀಶ್ ಶೆಟ್ಟಿ,ರಪೀಕ್ಖಾನ್ ಮುಂತಾದವರಿದ್ದರು. ರೋಹಿ ರತ್ನಾಕರ್,ಕಿರಣ್ ಭಟ್ ಸಹಕರಿಸಿದರು.

