ಕಡಬ: ಮಂಗಳವಾರದಂದು ಸಂಜೆ ಸುರಿದ ಮಳೆಗೆ ಮುರಿದು ಬಿದ್ದಿದ್ದ ಮರವೊಂದು ತಲೆಗೆ ಬಿದ್ದು ಕಡಬದ ವ್ಯಕ್ತಿಯೋರ್ವರು ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಬುಧವಾರದಂದು ಸಂಭವಿಸಿದೆ.20190403_155551

ಮೃತ ವ್ಯಕ್ತಿಯನ್ನು ಕಡಬ ಗ್ರಾಮದ ಪಣೆಮಜಲು ನಿವಾಸಿ ದಿನೇಶ ಯಾನೆ ನಿತ್ಯಾನಂದ ಗೌಡ(35) ಎಂದು ಗುರುತಿಸಲಾಗಿದೆ. ಕಾಣಿಯೂರು ಸಮೀಪದ ಪುಣ್ಚತ್ತಾರಿನಲ್ಲಿ ಗ್ಯಾರೇಜು ಹೊಂದಿದ್ದ ಇವರು ತನ್ನ ಪತ್ನಿಯ ಮನೆಯಲ್ಲಿದ್ದರೆನ್ನಲಾಗಿದೆ. ಮಂಗಳವಾರದಂದು ಸುರಿದ ಭಾರೀ ಗಾಳಿ – ಮಳೆಗೆ ತೋಟದಲ್ಲಿ ಮುರಿದು ಬಿದ್ದಿದ್ದ ಮರದ ಹತ್ತಿರದಿಂದ ಇಂದು ತೆರಳುತ್ತಿದ್ದಾಗ ತಲೆಗೆ ಮರ ಬಿದ್ದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

 

By suddi9

Leave a Reply

Your email address will not be published. Required fields are marked *