ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರೋತ್ಸವವು ಮಾ.14ರಂದು ಧ್ವಜರೋಹಣವಾಗಿ “ಕುದಿ”ಕರೆಯುವ ವಿಶಿಷ್ಠಪದ್ದತಿಯಂತೆ ವಾರ್ಷಿಕ ಜಾತ್ರೋತ್ಸವವು ನಿಗದಿಯಾಗುತ್ತಿದ್ದು ಈ ವರ್ಷದ ಜಾತ್ರೋತ್ಸವವು 29 ದಿನಗಳದಾಗಿದ್ದು ಸಾಮಾನ್ಯವಾಗಿ ಒಂದು ತಿಂಗಳ ಜಾತ್ರೋತ್ಸವದಲ್ಲಿ ಐದು ದಿವಸಗಳ ದಂಡಮಾಲೋತ್ಸವವು ,ಐದುದಿವಸಗಳಚೆಂಡಿನುತ್ಸವ, ಮಹಾರಥೋತ್ಸವ ,ಅಂತೆಯೇ ಅವಭೃಸ್ನಾನ (ಆರಾಟ)ದಿಂದ ಜಾತ್ರೋತ್ಸವವು ಮುಕ್ತಾಯವಾಗುವುದು.3vprathadasiddate

3-1ಈ ಜಾತ್ರೋತ್ಸವಗಳಲ್ಲಿ ವಿಶೇಷವಾಗಿ ಬಲಿಉತ್ಸವ ನಡೆಯುತ್ತಿದ್ದು 20ನೇ ದಂಡಮಾಲೋತ್ಸವದಿಂದ ಮಹಾರಥೋತ್ಸವದವರೆಗೆ ಹಲವು ರಥಸೇವೆಯು ಕೂಡ ನಡೆಯುತ್ತಿದೆ. 20ನೇ ದಂಡಮಾಲೇಯ ದಿನ ನವಿಲು ರಥ, ಒಂದನೇ ಚೆಂಡಿನಂದು ಕುಮಾರ ತೇರು, ಎರಡನೇ ಚೆಂಡಿನಂದು ಹೂ ತೇರು, ಮೂರನೇ ಚೆಂಡಿನಂದು ಸೂರ್ಯಮಂಡಲ, 4ನೇ ಚೆಂಡಿನಂದು ಚಂದ್ರಮಂಡಲ, ಐದನೇ ಚೆಂಡಿನಂದು ಆಳುಪಲ್ಲಕಿ ಅಂತೇಯೇ ಮಹಾರಥೋತ್ಸವದಂದು ಬ್ರಹ್ಮರಥ ಎಳೆಯಲ್ಪಡುತ್ತದೆ.3vprathada siddate

ಧ್ವಜರೋಹಣದ ಕಂಚುಬಲಿ ಉತ್ಸವದಂದು ಷಷ್ಠಿ ರಥ ಅಲ್ಲದೇ ಕೋಳಿಕುಂಟ ಹಾಗೂ ಚಂದ್ರಮಂಡಲದಂದು ಬೆಳ್ಳಿರಥವನ್ನು ಎಳೆಯಲ್ಪಡುತ್ತದೆ. ಹಲವು ವಿವಿಧ ತೇರುಗಳು ಈ ಕ್ಷೇತ್ರದಲ್ಲಿದ್ದು ಇಷ್ಟೊಂದು ರಥಗಳು ಬೇರೆ ದೇವಸ್ಥಾನದಲ್ಲಿರದು ಪೊಳಲಿ ಕ್ಷೇತ್ರವು ಹಲವು ವಿಶೇಷಗಳಿಂದ ಕೂಡಿದೆ.

By suddi9

Leave a Reply

Your email address will not be published. Required fields are marked *