ಜೋಧ್‌ಪುರ: ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಭಾರತೀಯ ವಾಯುಪಡೆಯ ಮಿಗ್‌-27 ವಿಮಾನ ಪತನವಾಗಿದ್ದು, ಪೈಲಟ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾರ್ಮರ್‌ ವಾಯುನೆಲೆಯಿಂದ ಹೊರಟಿದ್ದ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಜೋಧ್‌ಪುರದಿಂದ 120 ಕಿ.ಮೀ. ದೂರದ ಸಿರೋಹಿ ಬಳಿ ಬೆಳಗ್ಗೆ 11.45ಕ್ಕೆ ಪತನಗೊಂಡಿದೆ. ಪೈಲಟ್‌ ವಿಮಾನದಿಂದ ಜಿಗಿದು, ಪ್ರಾಣ ರಕ್ಷಿಸಿಕೊಂಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಪತನಗೊಂಡ ಒಂಬತ್ತನೇ ಯುದ್ಧ ವಿಮಾನ ಇದಾಗಿದೆ. ಒಂದು ಜಾಗ್ವಾರ್‌ ಫೈಟರ್‌ ಬಾಂಬರ್‌, ಎರಡು ಮಿಗ್‌-27 ಯುದ್ಧವಿಮಾನ, ಎರಡು ಹಾಕ್‌ ಯುದ್ಧವಿಮಾನ, ಎರಡು ಸೂರ್ಯ ಕಿರಣ್‌ ವಿಮಾನಗಳು, ತಲಾ ಒಂದು ಮೀರಜ್‌ 2000 ಮತ್ತು ಮಿಗ್‌ 21 ಯುದ್ಧವಿಮಾನ ಪತನವಾಗಿವೆ.

IMG-20190401-WA0004

By suddi9

Leave a Reply

Your email address will not be published. Required fields are marked *