ಬಂಟ್ವಾಳ: ಸಜೀಪಮೂಡ ಗ್ರಾಮದ ಸುಭಾಶ್ನಗರದಲ್ಲಿ ಶ್ರೀ ಪಂಚಶಕ್ತಿ ಆತಾಧನಾ ಸೇವಾ ಸಮಿತಿ ಆಶ್ರಯದಲ್ಲಿ ಕ್ಷೇತ್ರದ 10 ನೇ ಪ್ರತಿಷ್ಠಾ ವರ್ಧಂತ್ಯತ್ಸವದ ಪ್ರಯುಕ್ತ ಗಾಯತ್ರಿ ಪೂಜೆ, ಪರಿವಾರ ದೈವಗಳಿಗೆ ಪಂಚಪರ್ವ ಸೇವೆ ಭಾನುವಾರ ವಿಜ್ರಂಭಣೆಯಿಂದ ನಡೆಯಿತು. ಶ್ರೀ ದೇವಿ ಸನ್ನಿಧಿಯಲ್ಲಿ ವೇದಮೂರ್ತಿ ಕೊಳಕೆ ಶ್ರೀ ವಿಷ್ಣುಮೂರ್ತಿ ಮಯ್ಯ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಬೆಳಿಗ್ಗೆ 8 ನಾರಿಕೇಳ ಗಣಪತಿ ಹೋಮ, ತೋರಣ ಮುಹೂರ್ತ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.
ಶ್ರೀ ದೇವಿಗೆ ಗಾಯತ್ರಿ ಪೂಜೆ ನಡೆದು ಮಹಾಮಂಗಳಾರತಿ, ದೈವಗಳಿಗೆ ಪಂಚಪರ್ವ ಸೇವೆ, ಪ್ರಸಾದ ವಿತರಣೆ ನಡೆದು ಮಹಾ ಅನ್ನಸಂತರ್ಪಣೆ ಜರುಗಿತು. ಈಸಂದರ್ಭ ತಾ.ಪಂ.ಸದಸ್ಯ ಸಂಜೀವ ಪೂಜಾರಿ, ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಕೆ. ಸಂಜೀವ ಪೂಜಾರಿ, ಅಧ್ಯಕ್ಷ ಕ್ಯಾ. ಪ್ರಕಾಶ್, ದಶಮಾನೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ, ಉಪಾಧ್ಯಕ್ಷ ನಾಗೇಶ್ ಪೂಜಾರಿ, ಕಾರ್ಯದರ್ಶಿ ಜಗದೀಶ ಬಂಗೇರ ಮೊದಲಾದವರು ಉಪಸ್ಥಿತರಿದ್ದರು. ಸಂಜೆ ಭಜನೆ, ಶ್ರೀ ದೇವಿಗೆ ಪುಷ್ಪಾಲಂಕಾರ ಪೂಜೆ, ಧೂಮವಾತಿ ಬಂಟ, ಕ್ಷೇತ್ರಪಾಲ ದೈವಗಳಿಗೆ ಪಂಚಪರ್ವ ಸೇವೆ, ರಾತ್ರಿ ಗುಳಿಗದೈವದ ಗಗ್ಗರ ಸೇವೆ ಕೋಲ ನಡೆಯಿತು.


