ಢವಳಗಿ: ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗುರುವಾರ ಸಂಜೆ ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಯಮನಪ್ಪ ಭೀಮಪ್ಪ ಭಜಂತ್ರಿ (65) ಕೊಲೆಯಾದ ವ್ಯಕ್ತಿ. ಸಾಬಣ್ಣ ಗಂಗಪ್ಪ ಉಕ್ಕಲಿ (70) ಕೊಲೆ ಮಾಡಿದ ವ್ಯಕ್ತಿ. ಪಾನ್‌ ಶಾಪ್‌ ಬಳಿ ಇಬ್ಬರು ಮೊದಲು ಮಾತಾಡುತ್ತ ಕುಳಿತಿದ್ದು, ಸಮಯ ಕಳೆದಂತೆ ಇಬ್ಬರ ನಡುವೆ ಜಗಳ ನಡೆದಿದೆ. ಸಾಬಣ್ಣ ಮನೆಗೆ ಹೋಗಿ ಕೊಡಲಿ ತಂದು ಯಮಪ್ಪನ ಕುತ್ತಿಗೆಗೆ ಬಲವಾಗಿ ಹೊಡೆದಿದ್ದಾನೆ.ಇದರಿಂದ ಯಮನಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಿಪಿಐ ರವಿಕುಮಾರ ಕಪ್ಪತ್ತನ್ನವರ್‌ ಅವರು ಆರೋಪಿಯನ್ನು ವಶಕ್ಕೆ ಪಡೆದು, ಶವವನ್ನು ಇಲ್ಲಿನ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.ಕೊಲೆಗೆ ಹಳೆಯ ವೈಷಮ್ಯ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೃತನ ಮಗ ಬಸಪ್ಪ ದೂರು ದಾಖಲಿಸುವ ಸಿದ್ಧತೆಯಲ್ಲಿದ್ದಾರೆ. ಆದರೆ ದೂರು ದಾಖಲಿಸಿಕೊಂಡು ಎಫ್‌ಐಆರ್‌ ಮಾಡಿ, ಆರೋಪಿಯನ್ನು ಜೈಲಿಗೆ ಕಳಿಸಲು ಕ್ರಮ ಕೈಕೊಳ್ಳಲಾಗುತ್ತದೆ ಎಂದು ಸಿಪಿಐ ತಿಳಿಸಿದ್ದಾರೆ
ReplyForward

By suddi9

Leave a Reply

Your email address will not be published. Required fields are marked *