ಬಂಟ್ವಾಳ: ಶ್ರೀ ಶಾರದಾಂಬಿಕಾ ಭಜನಾ ಸಂಘ ಶಾರದಾ ನಗರ ಸಜೀಪ ಮುನ್ನೂರು ಅದರ 60ನೇ ವಾರ್ಷಿಕೋತ್ಸವದ ಅಂಗವಾಗಿ ಬರ್ಪೆ ಫ್ರೆಂಡ್ಸ್ ಯೂನಿಯನ್ ಶಾರದಾನಗರ ಇದರ ವತಿಯಿಂದ ರಾಷ್ಟ್ರ ಮ ಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಎಳೆಯ ಕ್ರೀಡಾಪಟು ತನ್ಮಯ ಎಂ. ಕೊಟ್ಟಾರಿ ಅವರನ್ನು ಎಂ.ಸುಬ್ರಹ್ಮಣ್ಯ ಭಟ್ ಸಮ್ಮಾನಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎಂ.ಮಹಾಬಲ ಕೊಟ್ಟಾರಿ, ಜಯಂತ ಗಟ್ಟಿ, ಅರವಿಂದ ಭಟ್, ಎಸ್.ಪದ್ಮನಾಭ ಕೊಟ್ಟಾರಿ, ಸೋಮಶೇಖರ, ವಿಶ್ವನಾಥ ಕೊಟ್ಟಾರಿ ಮತ್ತಿತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎಂ.ಮಹಾಬಲ ಕೊಟ್ಟಾರಿ, ಜಯಂತ ಗಟ್ಟಿ, ಅರವಿಂದ ಭಟ್, ಎಸ್.ಪದ್ಮನಾಭ ಕೊಟ್ಟಾರಿ, ಸೋಮಶೇಖರ, ವಿಶ್ವನಾಥ ಕೊಟ್ಟಾರಿ ಮತ್ತಿತರು ಉಪಸ್ಥಿತರಿದ್ದರು.

