ಪೊಳಲಿ:ಪೊಳಲಿ ರಾಮಕೃಷ್ಣ ತಪೋವನದಲ್ಲಿ ಎ.15 ರಿಂದ 21ರ ವರೆಗೆ ಉಚಿತ ಬೇಸಿಗೆಯ ಮಕ್ಕಳ ಚೈತನ್ಯ ಶಿಬಿರ ನಡೆಯಲಿದೆ. ಮಕ್ಕಳ ಬುದ್ಧಿಮತ್ತೆಯ ಸಂವರ್ಧನೆಗಾಗಿ ವಿವಿಧ ಪ್ರಶಿಕ್ಷಣಗಳನ್ನು ಶಿಬಿರದಲ್ಲಿ ಆಯೋಜಿಸಲಾದ ಯೋಗ, ಸೂರ್ಯನಮಸ್ಕಾರ, ಪ್ರಾಣಾಯಾಮ,ಕರಾಟೆ,ವಿವಿಧ ಕರ ಕೌಶಲ್ಯ ಮತ್ತು ವಿವಿಧ ಒಳಾಂಗಣ ಮತ್ತು ಹೊರಾಂಗಣ ಆಟಗಳು, ಶಾಸ್ತ್ರೀಯ ಸಂಗೀತ, ಆದ್ಯಾತ್ಮಿಕತೆ, ಧ್ಯಾನ, ಭಜನೆ, ವ್ಯಕ್ತಿತ್ವ ವಿಕಸನದ ತರಬೇತಿ ಮುಂತಾದ ಕಾರ್ಯಕ್ರಮಗಳು ನಡೆಯಲಿದ್ದು ವಿದ್ಯಾರ್ಥಿಗಳೆಲ್ಲರೂ ತಮ್ಮ ವ್ಯಕ್ತಿತ್ವವನ್ನು ನಿರ್ಮಾಣಗೊಳಿಸಿಕೊಂಡು ಶ್ರೇಯ ಮಾರ್ಗದಲ್ಲಿ ಜೀವನವನ್ನು ಮುಂದುವರಿಸುವುದಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಗಳು ತಿಳಿಸಿದ್ದಾರೆ.
