ನೀರುಮಾರ್ಗ:ಸ್ಪೂರ್ತಿ, ಮಹಾತ್ವಾಕಾಂಕ್ಷೆ ಹಾಗೂ ದುಡಿಮೆಯ ಹಂಬಲವಿದ್ದಲ್ಲಿ ಜೀವನದಲ್ಲಿ ಸಾಧನೆಯನ್ನು ಮಾಡಲು ಸಾಧ್ಯ. ಕೈಕೆಸರಾದರೆ ಬಾಯಿ ಮೊಸರು ಎಂಬ ನಾನ್ನುಡಿಯಂತೆ ಜೀವನದಲ್ಲಿ ನೋವಿದ್ದಾಗ ನಲಿವಿನ ಬೆಲೆ ತಿಳಿಯಲು ಸಾಧ್ಯ. ಬಹುಮಾನವೆನ್ನುವುದು ವ್ಯಕ್ತಿಯನ್ನು ಗುರಿತಿಸುತ್ತದೆ. ಈ ಗುರಿತಿಸುವಿಕೆ ಮಾನವನ ಬೆಳವಣಿಗೆಗೆ ಬಲವಾದ ಶಕ್ತಿ ನೀಡುತ್ತದೆ. ಯಶಸ್ಸನ್ನು ಗಳಿಸಿ ಜೀವನದಾದ್ಯಂತ ಅದನ್ನು ಉಳಿಸಿಕೊಂಡು ಸಾಧಕರಾಗಿ ಬಾಳಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರೊಫೆಸರ್ ಹಾಗೂ ಮಾಜಿ ರಿಜಿಸ್ಟ್ರಾರ್ ಪ್ರೊ.| ಪಿ. ಎಸ್. ಯಡಪಡಿತ್ತಾಯ ಹೇಳಿದರು.

2303malaliM1

ಅವರು ಕರಾವಳಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್‍ನಲ್ಲಿ ಶನಿವಾರ ನಡೆದ ಕರಾವಳಿ ಕಾಲೇಜುಗಳ ಸಮೂಹದ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ಗ್ರೂಪ್ ಆಫ್ ಕಾಲೇಜಿನ ಚೇರ್‍ಮ್ಯಾನ್ ಗಣೇಶ್ ಎಸ್. ರಾವ್ ಮಾತಾಡಿ, ಮನುಷ್ಯನೂ ಎಲ್ಲ ಪ್ರಾಣಿಗಳಂತೆ ಪ್ರಕೃತಿಯಲ್ಲಿ ಒಂದು ಸಾಮಾನ್ಯ ಜೀವಿ. ಆದರೂ ಮನುಷ್ಯನಾದವನು ಇತರ ಪ್ರಾಣಿ-ಪಕ್ಷಿಗಳಿಗಿಂತ ತುಂಭಾ ಭಿನ್ನವಾಗಿದ್ದಾನೆ. ಅದರಲ್ಲೂ ಶಿಕ್ಷಣ ಪಡೆದ ವ್ಯಕ್ತಿಯು ಎಲ್ಲರಿಗಿಂತಲೂ ಭಿನ್ನವಾಗಿ ಕಾಣಿಸಿಕೊಳ್ಳುತ್ತಾನೆ. ಶಿಕ್ಷಣ ಎನ್ನುವುದು ಅತಿ ಅಗತ್ಯವಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಇದು ಮಹತ್ತರ ಕೊಡುಗೆಯನ್ನು ನೀಡುತ್ತದೆ. ಇಂದು ಹಲವು ಮಕ್ಕಳು ಬಹಮಾನ ವಿಜೇತರಾಗಿದ್ದಾರೆ. ಆದರೆ ಮಕ್ಕಳು ತನ್ನ ಜೀವನದಲ್ಲಿ ತಮ್ಮ ಕಾಲಲ್ಲಿ ನಿಲ್ಲುವುದೇ ನಿಜವಾದ ಬಹುಮಾನವಾಗಿದೆ. ಕಾಲೇಜಿನಲ್ಲಿ ಪಡೆದ ಶಿಸ್ತು, ವಿದ್ಯೆ ತಮ್ಮ ಮುಂದಿನ ಭವಿಷ್ಯಕ್ಕೆ ಬುನಾದಿಯಗಬಲ್ಲುದು ಎಂದು ನುಡಿದರು.

2303malaliM2
ಈ ವೇಳೆ ಸಾಧನೆಗೈದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ಪ್ರದಾನಗೈದು ಶುಭಕೋರಿದರು. ಓವರ್ ಆಲ್ ಚ್ಯಾಂಪಿಯನ್‍ಷಿಪ್ ರನ್ನರ್ ಅಪ್ ಅನ್ನು ಫಾರ್ಮಸಿ ವಿದ್ಯಾರ್ಥಿಗಳು ಪಡೆದುಕೊಂಡರು. ಓವರ್ ಆಲ್ ಚ್ಯಾಂಪಿಯನ್‍ಶಿಪ್ ಸ್ಪೋಟ್ರ್ಸ್ ವಿನ್ನರ್ ಆಗಿ ಕಾಮರ್ಸ್ ಆಂಡ್ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಪಡೆದುಕೊಂಡರು. ವೈಯಕ್ತಿಕ ಸಾಧನೆಗೈದ ವಿದ್ಯಾರ್ಥಿಗಳನ್ನು ವಿಶೇಷ ರೀತಿಯಲ್ಲಿ ಗೌರವಿಸಲಾಯಿತು.

ನಿರ್ದೇಶಕಿ ಲತಾ ಜಿ. ರಾವ್, ಡೀನ್ ಅಮರನಾಥ್ ಶೆಟ್ಟಿ, ಫಾರ್ಮಸಿ ಪ್ರಿನ್ಸಿಪಾಲ್ ಸುರೇಶ್ ಬಾಬು, ನರ್ಸಿಂಗ್ ಪ್ರಿನ್ಸಿಪಾಲ್ ಮೋಲ್ಲಿ ಸರ್ಡಾನ್ಹ, ಕರಾವಳಿ ಗ್ರೂಪ್ ಆಫ್ ಕಾಲೇಜ್‍ನ ಪ್ರಿನ್ಸಿಪಾಲ್ ಮೋಹನ್, ಆಡಳಿತಧಿಕಾರಿ ಜೀಶನ್ ಎಸ್.ಎಂ. ಮುಂತಾದವರು ಉಪಸ್ಥಿತರಿದ್ದರು. ನಿಶಾಂತ್ ಹಾಗೂ ಜಿ.ಡಿ. ಪ್ರಸಾದ್ ನಿರೂಪಿಸಿದರು. ಅಂಜು ವಿ., ಲೆವೆಂಡರ್ ಸ್ವಾಗತಿಸಿದರು. ಮಿಷಲ್ ಧನ್ಯವಾದಗೈದರು. ಇದಾದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಮೂಡಿಬಂದವು.ಕರಾವಳಿ ಗ್ರೂಪ್ ಆಫ್ ಕಾಲೇಜಿನ ಚೇರ್‍ಮ್ಯಾನ್ ಗಣೇಶ್ ಎಸ್. ರಾವ್ ಮಾತಾಡಿದರುವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನಿಸಲಾಯಿತು

By suddi9

Leave a Reply

Your email address will not be published. Required fields are marked *