ವಾಮಂಜೂರು: ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಎನ್‍ಎಂಎಎಂಐಟಿ, ನಿಟ್ಟೆಯಲ್ಲಿ ಮಾರ್ಚ್ 21 ಮತ್ತು 22ರಂದು ಜರಗಿದ ವಿಟಿಯು ಮಂಗಳೂರು ವಲಯ ಫುಟ್‍ಬಾಲ್ ಟೂರ್ನಿಯಲ್ಲಿ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಪುರುಷರ ಫುಟ್‍ಬಾಲ್ ತಂಡವು ಅಮೋಘ ಜಯವನ್ನು ಸಾಧಿಸಿದೆ.
ಈ ಮೂಲಕ ಎಸ್‍ಐಟಿ, ತುಮಕೂರಿನಲ್ಲಿ ಮಾರ್ಚ್ 24 ಮತ್ತು 25ರಂದು ನಡೆಯಲಿರುವ ವಿಟಿಯು ಅಂತರ ವಲಯ ಫುಟ್‍ಬಾಲ್ ಟೂರ್ನಿಗೆ ಅರ್ಹತೆಯನ್ನು ಗಳಿಸಿದೆ.

