ವಿಠಲ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ಹತ್ತು ಬಡ ವಿದ್ಯಾರ್ಥಿಗಳನ್ನು ಮಂಜಲಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ವತಿಯಿಂದ ದತ್ತು ಸ್ವೀಕರಿಸಿ ಅವರಿಗೆ ಒಟ್ಟು 20 ಸಾವಿರ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಪ್ರಸಾದ್ ಮಂಜಲಾಡಿ, ಶಂಕರಿ ಕೆಟರಿಂಗ್‍ನ ವಸಂತ ಭಟ್, ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಮತ್ತು ಸಹಶಿಕ್ಷಕರು ಉಪಸ್ಥಿತರಿದ್ದರು.


