ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಮಂದಿರದ ಜೀರ್ನೋದ್ಧಾರ ಕಾರ್ಯವು ನಡೆಯುತ್ತಿದ್ದು ಇದರ ಪ್ರಯುಕ್ತ ಸನ್ನಿಧಿಯಲ್ಲಿ ಪ್ರತಿ ಶನಿವಾರ ನಡೆಯಲಿರುವ ಭಜನಾ ಕಾರ್ಯಕ್ರಮವನ್ನು ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಶ್ರೀ ಮಹಾಬಲ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಕಾರ್ಯಾಧ್ಯಕ್ಷ ಪದ್ಮನಾಭ ಗೌಡ, ಉಪಾಧ್ಯಕ್ಷ ಕೇಶವ ವಿಟ್ಲ, ಆರ್ ಕೆ ಆಟ್ರ್ಸ್ ಚಿನ್ನರ ಮನೆ ಇದರ ನಿರ್ದೇಶಕ ರಾಜೇಶ್ ವಿಟ್ಲ, ಶೀನ ವಿಟ್ಲ, ಹರೀಶ್ ಮೇಗಿನಪೇಟೆ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಆರ್ ಕೆ ಆಟ್ರ್ಸ್ ಚಿನ್ನರ ಮನೆಯವರಿಂದ ಕುಣಿತ ಭಜನೆ ನಡೆಯಿತು.
