ವಿಟ್ಲ :ಮಹಿಳಾ ಮಂಡಲ ವಿಟ್ಲ, ತಾಲೂಕು ಮಹಿಳಾ ಮಂಡಲ ಒಕ್ಕೂಟ ಬಂಟ್ವಾಳ ಹಾಗೂ ಲಯನ್ಸ್ ಕ್ಲಬ್ ವಿಟ್ಲ ಇದರ ಸಂಯುಕ್ತ ಆಶ್ರಯದಲ್ಲಿ ವಿಟ್ಲ ಮಹಿಳಾ ಮಂಡಲದ ಸಭಾ ಭವನದಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಮಂಗಳೂರು ಮಹಿಳಾ ಮಂಡಲಗಳ ಉಕ್ಕೂಟದ ಕಾರ್ಯದರ್ಶಿ ಪ್ರೇಮಲತಾ ರಾವ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಂಟ್ವಾಳ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿದೇವಿ ಸಭಾರ್ಧಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಜಯಾ ರೈ ಮತ್ತು ವಿಟ್ಲ ಮಹಿಳಾ ಮಂಡಲದ ಗೌರವಾಧ್ಯಕ್ಷೆ ಹೇಮಲತಾ ಜೆ ಸಾಲಿಯಾನ್ ಇವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳಾ ಮಂಡಲಗಳ ಸದಸ್ಯೆಯಗಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಲಾಯಿತು.
ವಿಟ್ಲ ಮಹಿಳಾ ಮಂಡಲದ ಅಧ್ಯಕ್ಷೆ ಧರ್ಮಾವತಿ ಪಿ ಬಿ ಇವರ ಅಧ್ಯಕ್ಷತೆಯಲ್ಲಿ ಸಾಯಂಕಾಲ ಸಮಾರೋಪ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪಡಾರು ಅದಿತಿ ಚಂದ್ರಶೇಖರ ಭಟ್ ಇವರು ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ವಿಟ್ಲ ಮಹಿಳಾ ಮಂಡಲದ ಸದಸ್ಯೆ ಭಾರತಿ ಪ್ರಕಾಶ್ ಸ್ವಾಗತಿಸಿದರು. ತಾಲೂಕು ಮಹಿಳಾ ಮಂಡಲಗಳ ಜತೆಕಾರ್ಯದರ್ಶಿ ಸರಿತಾ ವಂದಿಸಿದರು. ಕಾರ್ಯದರ್ಶಿ ವಿಜಯಲಕ್ಷ್ಮಿ ಅರುಣ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

