ಸುದ್ದಿ9ಕೈಕಂಬ: ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ(ರಿ) ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಪುರೋಹಿತ್ ಶ್ರೀ ಕೆ.ಧನಂಜಯ ಆಚಾರ್ಯ ಅವರ ನೇತೃತ್ವದಲ್ಲಿ ಸೆ.16 ಮಂಗಳವಾರ ಬೆಳಗ್ಗೆ 8.30ರಿಂದ ಕಿನ್ನಿಕಂಬಳ ಶ್ರೀ ರಾಧಕೃಷ್ಣ ಭಜನಾ ಮಂದಿರದಲ್ಲಿ ನಡೆಯಿತು.


ಕಲಶ ಪ್ರತಿಷ್ಠೆ, ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ಹಾಗೂ ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ನಂತರ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ “ಥಂಡರ್ ಗೈಸ್” ಬಜ್ಪೆ ಇವರಿಂದ ಜಾನಪದ ನೃತ್ಯ ವೈವಿದ್ಯ ನಡೆಯಿತು. ಅಧ್ಯಕ್ಷರಾದ ಜಿ.ಗಣೇಶ್ ಅಚಾರ್ಯ, ಗೌರವ ಅಧ್ಯಕ್ಷರಾದ ಜನಾರ್ಧನ ಆಚಾರ್ಯ ಕಿನ್ನಿಕಂಬಳ, ಉಪಾಧ್ಯಕ್ಷರಾದ ಉದಯ ಆಚಾರ್ಯ ಗುರುಪುರ, ಕಾರ್ಯದರ್ಶಿಯಾದ ಪುರುಷೋತ್ತಮ ಆಚಾರ್ಯ, ಕೋಶಾಧಿಕಾರಿಯಾದ ಅಡ್ಡೂರು ನವೀನ ಆಚಾರ್ಯ, ಜತೆ ಕಾರ್ಯದರ್ಶಿಯಾದ ಪ್ರಕಾಶ್ ಪಿ.ಆಚಾರ್ಯ ಹಾಗೂ ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಮಿತಿ ಕೈಕಂಬ ಇದರ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ವಿಶ್ವಕರ್ಮ ಸೇವಾ ಸಂಘದ ಸಮಾಜ ಬಾಂಧವರು ಭಾಗವಹಿಸಿದ್ದರು.










