ಪೊಳಲಿ:ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹಾಗೂ ಅವರ ಪುತ್ರ, ಶಿವಮೊಗ್ಗ ಸಂಸದ ರಾಘವೇಂದ್ರ ಶನಿವಾರ(ಮಾ. 9) ಬೆಳಿಗ್ಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗುತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ, “ದೇವಸ್ಥಾನ ಕಂಡು ನನಗೆ ಅತೀವ ಸಂತಸವಾಯಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುದೊಡ್ಡ ಗೆಲುವಿನೊಂದಿಗೆ ನರೇಂದ್ರ ಮೋದಿಯವರೇ ಮುಂದಿನ ಅವಧಿಗೂ ಪ್ರಧಾನಿಯಾಗುವಂತೆ ಕ್ಷೇತ್ರದ ದೇವಿಯರಲ್ಲಿ ಬೇಡಿಕೊಂಡೆ. ದೇವರ ಅನುಗ್ರಹದಿಂದ ರಾಜ್ಯದಲ್ಲೂ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ ಈ ರಾಷ್ಟ್ರ ಮತ್ತು ದೇಶವಾಸಿಗಳ ಸುರಕ್ಷತೆ ಬಯಸಿದೆ” ಎಂದರು.

9vp yadiyurappa9vp yadiyurappa-2

9vp yadiyurappa-3 9vp yadiyurappa-4ವರೊಂದಿಗೆ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ, ಮಾಜಿ ಉಪಸಭಾಪತಿ ಯೋಗೀಶ್ ಭಟ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, .ಜಗದೀಶ್ ಅಧಿಕಾರಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಬಂಟ್ವಾಳ ಬಿ.ಜೆ.ಪಿ. ಅಧ್ಯಕ್ಷ ದೇವ್‍ದಾಸ್ ಶೆಟ್ಟಿ, ಜಿ.ಆನಂದ್, ದೇವಳದ ಅರ್ಚಕ ಪವಿತ್ರಪಾಣಿ ಮಾಧವ ಭಟ್, ನಾರಾಯಣ ಭಟ್,ಪರಮೇಶ್ವರ ಭಟ್, ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ,ಯು. ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಾಣಾಧಿಕಾರಿ ಪ್ರವೀಣ್, ವೆಂಕಟೇಶ್ ನಾವಡ, ಯಶವಂತ ಪೊಳಲಿ ಮತ್ತಿತ್ತರರು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *