ಪೊಳಲಿ :ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ವಿದಿವಿಧಾನಗಳು ಜರುಗುತ್ತಿದ್ದು, ಮೂರನೇ ದಿನವಾದ ಇಂದು(ಮಾ.6) ಹಲವು ವೈದಿಕ-ಸಾಂಸ್ಕøತಿಕ-ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ವೈದಿಕ ಕಾರ್ಯಕ್ರಮಗಳು:
ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 6ರಿಂದ ಪುಣ್ಯಾಹ, ಗಣಪತಿ ಹೋಮ, ವಿಷ್ಣುಸಹಸ್ರನಾಮ ಹೋಮ, ಸಪರಿವಾರ ಶ್ರೀರಾಜರಾಜೇಶ್ವರಿ ದೇವರುಗಳಿಗೆ ಕ್ಷಾಲನಾದಿ ಬಿಂಬಶುದ್ಧಿ, ಸ್ಕಂದಪ್ರೋಕ್ತ ಹೋಮ, ವಿಘ್ನಪ್ರೋಕ್ತಹೋಮ, ದ್ವಾರಶಾಂತಿ, ಭದ್ರಕಾಳಿ ದೇವರಿಗೆ ವಿಶೇಷ ಶಾಂತಿಹೋಮ, ಹೋಮ ಕಲಶಾಭಿಷೇಕ, ಅಂಕುರ ಪೂಜೆ ಮಧ್ಯಾಹ್ನ ಮಹಾಪೂಜೆ ಜರುಗಲಿದೆ. ಸಾಯಂಕಾಲ 5ರಿಂದ ದುರ್ಗಾಪೂಜೆ, ಕುಂಡಶುದ್ಧಾದಿಗಳು, ಅಂಕುರ ಪೂಜೆ ಹಾಗು ಮಹಾಪೂಜೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮಗಳು:
ಶ್ರೀದುರ್ಗಾಪರಮೇಶ್ವರಿ ವೇದಿಕೆ
ಈ ವೇದಿಕೆಯಲ್ಲಿ ಇಂದು ಬೆಳಿಗ್ಗೆ 8.30ರಿಂದ ಮೇಘ ಸಾಲಿಗ್ರಾಮ ಹಾಗು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, 9.30ರಿಂದ ಶ್ರೀಮಂಜುನಾಥೇಶ್ವರ ಕಾಳಭೈರವ ಭಜನಾ ಮಂದಿರ ಮಟ್ಟಿ ಮಳಲಿ ತಂಡದಿಂದ ಭಜನೆ, 10.30ರಿಂದ ಶ್ರೀದೇವಿ ಭಜನಾ ಮಂಡಳಿ ಮೂಡುಶೆಡ್ಡೆ ತಂಡದಿಂದ ಭಜನೆ, ಸಂಜೆ 4ರಿಂದ ಶ್ರೀಗಣೇಶ್ ಮತ್ತು ಪಾಂಡುರಂಗ ಭಜನಾ ಮಂಡಳಿ ವಾಮದಪದವು ತಂಡದಿಂದ ಭಜನೆ ನಡೆಯಲಿದೆ.
ಶ್ರೀರಾಜರಾಜೇಶ್ವರಿ ವೇದಿಕೆ

ಈ ವೇದಿಕೆಯಲ್ಲಿ 11.30ರಿಂದ ರಾಜೇಶ್ ಪೊಳಲಿ ಅವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ 12.30ರಿಂದ ಶಿವಾಂಕಂ ಬೆಂಗಳೂರು ಅವರಿಂದ ಭರತನಾಟ್ಯ, ಮಧ್ಯಾಹ್ನ 1.30ರಿಂದ ಅತ್ರೇಯಿ ಕೃಷ್ಣ ಕಾರ್ಕಳ ಇವರಿಂದ ಕರ್ಣಾಟಕ ಸಂಗೀತ, 2.30ರಿಂದ ಅಶ್ವಿನಿ ಕುಂಡದಕುಳಿ ಅವರಿಂದ ಯಕ್ಷಗಾನ ನಡೆಯಲಿದೆ.
ಸಂಜೆ 7ರಿಂದ ಫಯಾಸ್‍ಖಾನ್ ಮತ್ತು ಬಳಗ ಬೆಂಗಳೂರು ಇವರಿಂದ ಹಿಂದೂಸ್ಥಾನಿ ಗಾಯನ, ರಾತ್ರಿ 9ರಿಂದ ನೃತ್ಯ ನಿಕೇತನ ಕೊಡವೂರು ಪ್ರಸ್ತುತ ಪಡಿಸುವ ನೃತ್ಯ ವೈವಿಧ್ಯ-ನಿರ್ದೇಶನ ವಿದ್ವಾನ್ ಸುದೀರ್ ರಾವ್ ಕೊಡವೂರು, ರಾತ್ರಿ 10ರಿಂದ ಶ್ರೀ ಭಗವತೀ ತೀಯಾ ಸೇವಾ ಸಮಿತಿ ಪೊಳಲಿ ಇವರಿಂದ ಯಕ್ಷಗಾನ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮ: ಸಂಜೆ 6 ಗಂಟಟೆಯಿಂದ ಈ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದ್ದು, ಶ್ರೀಗುರುದೇವದತ್ತ ಸಂಸ್ಥಾನಂ ಶ್ರೀಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಹಲವರ ಸನ್ಮಾನ ನಡೆಯಲಿದೆ.
