ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.4ರಿಂದ 13ರ ತನಕ ವಿವಿಧ ಭಕ್ಷ ಭೋಜನಗಳನ್ನು ಸುಮಾರು 50 ಮಂದಿ ಬಾಣಸಿಗರ ತಂಡ ಸಿದ್ಧಪಡಿಸಲಿದೆ.

ಒಟ್ಟು ಹತ್ತು ದಿನಗಳ ಕಾಲ ಬ್ರಹ್ಮಕಲಶೋತ್ಸವ ಉತ್ಸವಾದಿಗಳು ನಡೆಯಲಿದ್ದು, ಈ ಹತ್ತು ದಿನಗಳಲ್ಲೂ ಹತ್ತು ಬಗೆಯ ವಿಶೇಷ ಸಿಹಿತಿಂಡಿಗಳು ಮುಂತಾದವುಗಳು ಭಕ್ತರ ಪಾಲಿಗೆ ಪ್ರಸಾದ ರೂಪದಲ್ಲಿ ಸಿಗಲಿದೆ. ಈಗಾಗಲೇ ಪಾಕಶಾಲೆಯಲ್ಲಿ ಸುಮಾರು 5 ಲಕ್ಷ ಲಾಡುಗಳು, 3 ಲಕ್ಷ ಮೈಸೂರು ಪಾಕ್, 3 ಲಕ್ಷ ಕಡಿ, ಕಾಶಿ ಹಲ್ವಗಳನ್ನು ಸಿದ್ಧಗೊಳಿಸಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಬೆಳಿಗ್ಗೆ ನಾಷ್ಟದ ವ್ಯವಸ್ಥೆ, ಮಧ್ಯಾಹ್ನದಿಂದ ನಿರಂತರ ಅನ್ನದಾಸೋಹ, ಸಂಜೆ ಉಪಹಾರ ಇರಲಿದೆ. ಊಟೋಪಚಾರಕ್ಕೆ ಹಲವು ಬಗೆಯ ಪಲ್ಯ, ಸಾಂಬಾರು ಇರಲಿದೆ. ಅಡುಗೆ ಬ್ರಾಹ್ಮಣರ ತಂಡದಲ್ಲಿ ರುಚಿಕಟ್ಟಾದ ಅಡುಗೆಗೆ ಹೆಸರಾದ ಚಂದ್ರಶೇಖರ್ ರಾವ್ ಮರವೂರು, ಪ್ರಮೋದ್ ಕಾರಂತ್ ಪಚ್ಚನಾಡಿ, ಮೋಹನ್ ಭಟ್, ಕೃಷ್ಣಾನಂದ ಹೊಳ್ಳ ಗಂದಾಡಿ ಮುಂತಾದವರು ಭಕ್ಷ್ಯ ಭೋಜ್ಯಗಳನ್ನು ತಯಾರಿಸಲಿದ್ದಾರೆ.

ಬಾಣಸಿಗರ ಜೊತೆಗೆ ಸ್ವಯಂಸೇವಕರ ತಂಡವೂ ಸಾಥ್ ನೀಡಲಿದ್ದು, ತರಕಾರಿ ಹಚ್ಚುವುದು, ಮಸಾಲೆ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವ ಸೇರಿ ನಾನಾ ಕೆಲಸದಲ್ಲಿ ನಿರತರಾಗಿದ್ದಾರೆ. ಭೋಜನ ಬಡಿಸಲು ಬಾಳೆ ಎಲೆಯ ವ್ಯವಸ್ಥೆ ಇದ್ದು, ಜೊತೆಗೆ ಕ್ಯಾಟರಿಂಗ್ ವ್ಯವಸ್ಥೆಯೂ ಇದೆ. ಸ್ವಯಂಸೇವಕರಾಗಿ ನೋಂದಾಯಿಸಿಕೊಂಡ ಸಂಘಸಂಸ್ಥೆಗಳ ತಂಡದ ಸದಸ್ಯರು ಆಹಾರವನ್ನು ಬಡಿಸಲಿದ್ದಾರೆ.

By suddi9

Leave a Reply

Your email address will not be published. Required fields are marked *