ಪೊಳಲಿ : ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಕ್ಷೇತ್ರದಲ್ಲಿ ಮಾರ್ಚ್ 4ರಿಂದ 13ರವರೆಗೆ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಮಾರ್ಚ್ 1ರಂದು ಶುಕ್ರವಾರ ಸಂಜೆ ಮಾಧ್ಯಮ ಕೇಂದ್ರ ಉದ್ಘಾಟಿಸಲಾಯಿತು.1vpananth padmanabh bhutt

1vp dr manjaya shetty

1 u t alva

ದೇವಳದ ಎದುರು ಭಾಗದಲ್ಲಿರುವ ಸರ್ವಮಂಗಳ ಸಭಾಗೃಹದಲ್ಲಿರುವ ಕಚೇರಿಯಲ್ಲಿ ವ್ಯವಸ್ಥೆಗೊಳಿಸಲಾದ ಮಾಧ್ಯಮ ಕೇಂದ್ರ ಉದ್ಘಾಟಿಸಿದ ದೇವಳದ ಅರ್ಚಕ ಅನಂತಪದ್ಮನಾಭ ಭಟ್, “ಬ್ರಹ್ಮಕಲಶೋತ್ಸವದ ಬಗ್ಗೆ ಎಲ್ಲ ಮಾಧ್ಯಮಗಳಿಂದ ಉತ್ತಮ ಪ್ರಚಾರ ನೀಡುವಂತೆ ಕೋರಿ, ಎಲ್ಲರ ಪ್ರಯತ್ನಕ್ಕೆ ಕ್ಷೇತ್ರದ ಅಮ್ಮನವರ ಅನುಗ್ರಹವಿರಲಿ” ಎಂದು ಆಶೀರ್ವದಿಸಿದರು.1vpkrishna kumar poonja

1vpasha jhyothi rai

1vp madyamaಉದ್ಘಾಟನಾ ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಆಡಳಿತ ಮೊಕ್ತೇಸರ ತಾರನಾಥ ಆಳ್ವ ಉಳಿಪಾಡಿಗುತ್ತು,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು , ಪ್ರಚಾರ ಸಮಿತಿ ಅಧ್ಯಕ್ಷೆ ಆಶಾಜ್ಯೋತಿ ರೈ, ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಕೃಷ್ಣರಾಜ ಮಾರ್ಲ, ಸುಬ್ರಾಯ ಕಾರಂತ, ಕೃಷ್ಣಕುಮಾರ ಪೂಂಜ, ವೆಂಕಟೇಶ ನಾವಡ, ಸುಕೇಶ್ ಚೌಟ, ಚರಣ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *