ಶ್ರೀಕ್ಷೇತ್ರ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶಾಶ್ವತ-ಸಮಗ್ರ ನೀರಾವರಿ ವ್ಯವಸ್ಥೆಯನ್ನು ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಬ್ರಾಹ್ಮಣ ಸಮುದಾಯದ ವತಿಯಿಂದ ಕಲ್ಪಿಸಲಾಗಿದೆ. ಇದರ ಉದ್ಘಾಟನೆ ಮಾ.3ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ನಡೆಸಲಾಗುವುದು. ದೇವರ ಅಭಿಷೇಕಕ್ಕೆ ಹೊರತುಪಡಿಸಿ ಅಡುಗೆ, ಕುಡಿಯುವ ನೀರು ಸೇರಿ ಶಾಶ್ವತ ಬಾವಿ ಸಹಿತ ಟ್ಯಾಂಕ್‍ನ ಮೂಲಕ ನೀರಿನ ಸರಬರಾಜು ನಡೆಯಲಿದೆ. ಗಂಗಾ ಪೂಜೆ, ಕಲಶ ಪೂಜೆ ಸೇರಿ ನಾನಾ ಧಾರ್ಮಿಕ ವಿದಿವಿಧಾನಗಳ ಮೂಲಕ ಸಾಂಕೇತಿಕ ಉದ್ಘಾಟನೆ ನಡೆಯಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ದೇವಸ್ಥಾನದ ಅರ್ಚಕ ವೃಂದದವರು, ತಂತ್ರಿವರ್ಯರು, ಆಡಳಿತ ವರ್ಗದವರು, ದೇವಸ್ಥಾನದ ಮೊಕ್ತೇಸರರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *