ಉಡುಪಿ: ಹಿರಿಯ ಪತ್ರಕರ್ತ ಶೇಖರ ಅಜೆಕಾರು ಅವರಿಗೆ ಕೃಷಿ ಬಂಧು ಪ್ರಶಸ್ತಿಯನ್ನು ಇತ್ತೀಚಿಗೆ ಮುಂಬಯಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ,ಸಂಘಟಕ ಕನ್ನಡ ಕಲಾಕೇಂದ್ರದ ಅಧ್ಯಕ್ಷ ಬಿ.ಬಾಲಚಂದ್ರ ರಾವ್ ಅವರು ಪ್ರದಾನಿಸಿದರು.ಇತರ ವೃತ್ತಿಯಲ್ಲಿದ್ದು ಕೃಷಿಯನ್ನು ನೆಚ್ಚಿಕೊಂಡು ಸ್ವತಹ ಕೃಷಿ ಮಾಡುತ್ತಾ, ಹೈನುಗಾರಿಕೆಯಲ್ಲಿ ತೊಡಗಿ, ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ವ್ಯಕ್ತಿಯೋರ್ವರಿಗೆ ವಾರ್ಷಿಕ ಪ್ರಶಸ್ತಿಯನ್ನು ನಗದು ಸಹಿತ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಥಾನ ನೀಡುತ್ತಾ ಬಂದಿದೆ.??????????

ಮಯೂರವರ್ಮ ಪ್ರತಿಷ್ಠಾನದ ಚಕ್ರಧಾರಿ ಪ್ರಶಸ್ತಿ ೨೦೧೯ ಪುರಸ್ಕೃತ ಗೋರೆಗಾಂವ್ ಕರ್ನಾಟಕ ಸಂಘ ಮುಂಬಯಿ ಇದರ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ, ಮಯೂರವರ್ಮ ಪ್ರತಿಷ್ಠಾನದ ಪ್ರಧಾನ ಸಂಚಾಲಕ ವಿಶ್ವನಾಥ ದೊಡ್ಮನೆ, ಫೆಂಡ್ಸ್ ಸ್ವಾವಲಂಬನಾ ಡೊಂಬಿವಲಿ ಇದರ ಪ್ರವರ್ತಕ ಕುಂದಾಪುರ ವೆಂಕಟೇಶ ಪೈ, ಕವಿ ಪೇತ್ರಿ ವಿಶ್ವನಾಥ ಶೆಟ್ಟಿ, ಪ್ರತಿಷ್ಠಾನದ ಉಪಾಧ್ಯಕ್ಷ ರಾಜೇಶ ಗೌಡ ಹಿರಿಯ ಸಂಘಟಕ ಜಿ.ಟಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.ಕಾಲು ಶತಮಾನಗಳಿಂದ ಶೇಖರ ಅಜೆಕಾರು ಗೊತ್ತು ಅವರ ಬಹುಮುಖ ಸೇವೆಯ ಬಗ್ಗೆ ಗೊತ್ತು. ಮುಂಬಯಿಗೆ ಅವರ ಕೊಡುಗೆಯ ಬಗ್ಗೆ, ಪತ್ರಕರ್ತರಾಗಿ ಅವರ ಸಾಧನೆ, ಅವರು ಸ್ಥಾಪಿಸಿದ ಸಂಘ ಸಂಸ್ಥೆಗಳ ಬಗೆಗೆ ಗೊತ್ತಿತ್ತು. ಆದರೆ ಅವರ ಕೃಷಿಯ ಬಗೆಗಿನ ಅಪಾರ ಒಲವು, ಬೆಂಬಲ, ಖುದ್ದು ಇಂದಿಗೂ ಗದ್ದೆಗಳಿದು ತಾನೇ ಸಂಭ್ರಮದಿಂದ ಕೃಷಿ ಮಾಡುವ ಉಮೇದಿನ ಬಗ್ಗೆ ತಿಳಿದು ಪರಮ ಸಂತೋಷವಾಯಿತು ಎಂದು ಅಭಿನಂದನಾ ಭಾಷಣ ಮಾಡಿದ ಪೇತ್ರಿ ವಿಶ್ವನಾಥ ಶೆಟ್ಟಿ ಹೇಳಿದರು.

ಕೃಷಿಕರಿಗೆ ಮುಬಯಿಯ ಮಯೂರವರ್ಮ ಪ್ರತಿಷ್ಠಾನ ನೀಡುತ್ತಾ ಬಂದಿರುವ ಈ ವಾರ್ಷಿಕ ಪ್ರಶಸ್ತಿ ತುಂಬಾ ಪ್ರೋತ್ಸಾಹದಾಯಕ. ಉದ್ಯಮಿ ಕಡಂದಲೆ ಸುರೇಶ ಭಂಡಾರಿ ಅವರ ಅಧ್ಯಕ್ಷತೆಯ ಈ ಸಂಸ್ಥೆ ಇತರರಿಗೆ ಮಾದರಿಯಾಗಿದೆ ಎಂದು ಸಪತ್ನೀಕರಾಗಿ ಗೌರವ ಸ್ವೀಕರಿಸಿದ ಶೇಖರ ಅಜೆಕಾರು ಕೃತಜ್ಞತೆ ಸಲ್ಲಿಸಿದರು. ಚತುರ್ವೇದ ಪರಾಯಣ, ಮಕ್ಕಳಿಂದ ವಿವಿಧ ವಿನೋದಾವಳಿ, ವಿಶ್ವನಾಥ ದೊಡ್ಮನೆ ರಚಿಸಿದ ಪೌರಾಣಿಕ ನಾಟಕ ಸೂರ್ಯಪ್ರಭೆ ಪ್ರದರ್ಶನ, ಅನ್ನದಾನ ನಡೆಯಿತು.

By suddi9

Leave a Reply

Your email address will not be published. Required fields are marked *