ಬಂಟ್ವಾಳ : ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪಮುನ್ನೂರು ಇದರ ಬ್ರಹ್ಮಕಲಶೋತ್ಸವ ದಿನಾಚರಣೆ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ದಂಪತಿ ಯವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಮೋಹನ್ ರಾವ್, ಕಲಾವಿದ ಪೊಳಲಿ ಸುಬ್ಬ ರಾವ್, ತಬಲವಾದಕ ವೆಂಕಟಕೃಷ್ಣ ಶಿಬರೂರು, ಸಲಹೆಗಾರ ಎಂ.ಸುಬ್ರಹ್ಮಣ್ಯ ಭಟ್, ಶಿಕ್ಷಕಿ ಸುಪ್ರಭಾ, ಲಕ್ಷ್ಮೀಯಮ್ಮ, ಶಾರದಾ ಎಸ್.ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಎನ್.ಕೆ.ಶಿವ, ಹರಿಪ್ರಸಾದ ಭಂಡಾರಿ, ದಿವಾಕರ, ಕೃಷ್ಣ ಭಟ್, ಶ್ರಿನಿವಾಸ ನಾಯ್ಕ, ಚಿತ್ರಾ ಪಿ., ದೇವಪ್ಪ ಮಡಿವಾಳ, ಚಿತ್ರಾ ಎಸ್.ರೈ ಮತ್ತಿತರರು ಉಪಸ್ಥಿತರಿದ್ದರು.

KAR_8934

By suddi9

Leave a Reply

Your email address will not be published. Required fields are marked *