ಪೊಳಲಿ: ಶ್ರೀಭಗವತೀ ತೀಯಾ ಸಮಾಜ ಸೇವಾ ಸಮಿತಿ ನಂದ್ಯ ಪೊಳಲಿ ವತಿಯಿಂದ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶ್ರೀದುರ್ಗಾಪರಮೇಶ್ವರಿ ಗುಡಿಯ ದ್ವಾರಧ್ವಯಗಳ ರಜತ ಕವಚ ಸಮರ್ಪಣಾ ಸಮಾರಂಭ ಭಾನುವಾರ ನಡೆಯಿತು.
ನಂದ್ಯದಲ್ಲಿ ಧಾರ್ಮಿಕ ಸಭೆ ನಡೆದ ಬಳಿಕ ಇಲ್ಲಿನ ಭಗವತಿ ಕ್ಷೇತ್ರದಿಂದ ಭವ್ಯ ಮೆರವಣಿಗೆಯ ಮೂಲಕ ಕಾಲ್ನಡಿಗೆಯಲ್ಲಿ ಸಂಚರಿಸಿದ ಭಕ್ತರು ರಜತ ಕವಚವನ್ನು ಪೊಳಲಿ ದೇವರಿಗೆ ಸಮರ್ಪಿಸಿದರು.
ತೀಯಾ ಆಚಾರಪಟ್ಟವರು, ಗುರಿಕಾರರು, ಮೊಕ್ತೇಸರರು ಧಾರ್ಮಿಕ ಕ್ರಮಗಳನ್ನು ನಡೆಸಿದರು. ಸುಮಾರು ಐದು ಸಾವಿರಕ್ಕೂ ಅದಿಕ ಮಂದಿ ಭಕ್ತರು ಕಾಲ್ನಡಿಗೆಯಲ್ಲಿ ಸಂಚರಿಸಿದರು. ಅಡ್ಡೂರಿನಲ್ಲಿ ಮುಸ್ಲಿಂ ಬಾಂಧವರು ತಂಪುಪಾನೀಯದ ವ್ಯವಸ್ಥೆ ಮಾಡಿದ್ದರು. ತೀಯ ಸಮಾಜದ ಮುಖಂಡರು, ಪೊಳಲಿ ತಂತ್ರಿವರ್ಗದವರು, ಪೂಜಾ ಬ್ರಾಹ್ಮಣರು, ಆಡಳಿತ ವರ್ಗದವರು, ನಾನಾ ಮುಖಂಡರು, ಸಾವಿರಾರು ಭಕ್ತರ ಸಮ್ಮುಖದಲ್ಲಿ ರಜತಕವಚವನ್ನು ಬರಮಾಡಿಕೊಳ್ಳಲಾಯಿತು.






