ಕಾವ ಋಷಿಗೆ ಒಲಿದ ಶಿವನೇ “ಕಾವೇಶ್ವರ”

ಶಿವನಿಗೂ ಪರ್ವತಕ್ಕೂ ಬಿಡಿಸಲಾಗದ ನಂಟು. ವೈರಾಗ್ಯವನ್ನು ತಾಳಿದ ಶಿವ ಪರ್ವತದಲ್ಲಿ ತಪಸ್ಸು ಮಾಡುತ್ತಾ
ಕೊನೆಗೊಂದು ದಿನ ಪರ್ವತರಾಜನ ಮಗಳನ್ನೇ ಮದುವೆಯಾಗಿ ಪಾರ್ವತಿ ಪತಿಯಾದ. ಬೆಳ್ಳೂರು ಕಾವೇಶ್ವರ ದೇವಾಲಯದ ಎದುರು ಇರುವ ರಮಣೀಯ ಹಾಗೂ ಎತ್ತರವಾದ ಗುಡ್ಡೆಗೆ “ಕಾವಗುಡ್ಡೆ” ಎಂದು ಹೆಸರು. ಕಾವಋಷಿಗಳು ಈ ಬೆಟ್ಟದ ತುದಿಯಲ್ಲಿ ತಪಸ್ಸು ಮಾಡಿಕೊಂಡು ಲಿಂಗರೂಪದಲ್ಲಿ ಶಿವನನ್ನು ಪ್ರತಿಷ್ಠಾಪಿಸಿದರು. ಅವರು ಪ್ರತಿಷ್ಠಾಪಿಸಿದ ಈ ಈಶ್ವರನಿಗೆ “ಕಾವೇಶ್ವರ” ನೆಂಬ ಹೆಸರು ಮನೆ ಮಾತಾಯಿತು.
ಎತ್ತರವಾದ ಗುಡ್ಡೆಯ ಮೇಲೆ ಇರುವ ಈ ಶಿವನ ಸನ್ನಿಧಾನಕ್ಕೆ ಏರಲು ಬುಡದಿಂದ ತುದಿಯವರೆಗೆ ಚಾಚಿರುವ ನಿಡಿದಾದ ಸೋಪಾನ ಶ್ರೇಣಿಯಿದೆ. ವಾಷರ್ಿಕ ಜಾತ್ರೆಯ ಧ್ವಜಾರೋಹಣದ ಮೊದಲು ಕೆಳಗಿನ ದೇವಸ್ಥಾನದಿಂದ ಬೆಳಕನ್ನು ಮೇಲೆ ಕೊಂಡು ಹೋಗಿ ಅಲ್ಲಿ ದೀಪ ಹಚ್ಚಿ ಪ್ರಾಥರ್ಿಸಿ ಅನಂತರ ಪುನಃ ದೇಗುಲಕ್ಕೆ ಬಂದು ಧ್ವಜಾರೋಹಣದೊಂದಿಗೆ ಜಾತ್ರೆಯ ಉತ್ಸವ ಪ್ರಾರಂಭಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿರುವ ಕಾವೇಶ್ವರ ದೇವಸ್ಥಾನ ಅತೀ ಕಾರಣಿಕ ಸ್ಥಳವಾಗಿದೆ ಎನ್ನುದರಲ್ಲಿ ಎರಡು ಮಾತಿಲ್ಲ. ತುಳುವಿನಲ್ಲಿ “ಬೊಲ್ಲ ಬತ್ತಿನ ಊರು” ಬೊಲ್ಲೂರು ಎಂಬುದಾಗಿ ಕರೆಸಿಕೊಂಡಿತು. ತದನಂತರ ಅದೇ ಕನ್ನಡದಲ್ಲಿ “ಬೆಳ್ಳೂರು” ಎಂಬುದಾಗಿ ನಾಮಕರಣಗೊಂಡಿತು.

64-467x700-467x700-467x700

ಬೊಲ್ಲ(ನೆರೆ)ಬಂದಾಗ ಜನರೆಲ್ಲ ಹೆದರಿ ಕಂಗಾಲಾದರು. ಕಾವಗುಡ್ಡೆಯನ್ನು ಏರಿ ಕಾವೇಶ್ವರನ್ನು ಪ್ರಾಥರ್ಿಸಿದರಂತೆ. ಆಗ ನೆರೆಯೆಲ್ಲ ಇಳಿದು ಹೋಯಿತು ಎನ್ನುವುದು ಕೂಡ ಜನಪದ ಕತೆಯಾಗಿ ಉಳಿದು ಕೊಂಡಿತು.
ಹಿಂದಿನ ಪರಂಪರೆ ಸಂಸ್ಕ್ರತಿಯನ್ನು ಉಳಿಸಿಕೊಂಡಿ ಬಂದ ಬೆಳ್ಳೂರು ಭತ್ತದ ಬೆಳೆ ತೆಂಗು ಕಂಗುಗಳೆಂಬ ಪ್ರಧಾನ ಬೆಳೆಗಳಿಂದ ಕಂಗೊಳಿಸುತ್ತಾ ಇದೆ. ಈಗ ಇಲ್ಲಿ ಕಾವೇಶ್ವರ ದೇವಸ್ಥಾನ, ಕಾವಗುಡ್ಡೆ, ನಾಗಬ್ರಹ್ಮಸ್ಥಾನ, ಮಹಮ್ಮಾಯಿ ದೇವಸ್ಥಾನ, ಮಾಡ್ಲಾಯ ದೈವದ ಮಾಡ, ಮಾಡ್ಲಾಯ ಕಲ್ಲು, ಪರಕೂರು ಭಟ್ಟರ ಬೀಡು, ಪ್ರಸಿದ್ಧ ಕೊಳತ್ತ ಮಜಲು ಕಂಬಳ, ಪಲ್ಗುಣಿ ಹೊಳೆ ಹೀಗೆ ಪ್ರಕೃತಿ ರಮಣೀಯತೆ ಹಾಗೂ ಜನಪದ ಸಂಸ್ಕ್ರತಿ ಪರಂಪರೆಯಿಂದ ಮೆರೆಯುತ್ತಾ ಇದೆ.
ಕಾವಗುಡ್ಡೆ ಬಹಳ ಎತ್ತರವಾಗಿರುದರಿಂದ ಹಿಂದಿನಕಾಲದಲ್ಲಿ ಹಿರಿಯರಿಗೆ ಅಲ್ಲಿಗೆ ಏರಿ ಇಳಿಯಲು ಕಷ್ಟವಾಗುತ್ತಾ ಇತ್ತು. ಆ ಸಮಯದಲ್ಲಿ ಕಾವಗುಡ್ಡೆಯ ಕೆಳಗೆ ವಾಸವಾಗಿದ್ದ ಭಕ್ತನೊಬ್ಬ ವಯಸ್ಸಾಗಿ ಬೆಟ್ಟ ಏರಲು ಅಶಕ್ತನಾದಾಗ ಶಿವನ್ನು “ಸ್ವಾಮಿ ನಿನ್ನನ್ನು ನೀನಿರುವ ಕಾವಗುಡ್ಡೆಗೆ ಬಂದು ದರ್ಶನ ಪಡೆಯಲು ನನ್ನ ಶರೀರದಲ್ಲಿ ಶಕ್ತಿಯಿಲ್ಲ. ಆದ್ದರಿಂದ ನಾನಿದ್ದಲ್ಲಿಗೆ ಬಂದು ನೆಲೆಸಿದರೆ ನಿನಗೆ ದಿನಕ್ಕೆ ಎರಡು ಕೊಡವಾದರೂ ನೀರಿನ ಅಭಿಷೇಕ ಮಾಡುತ್ತೇನೆ” ಎಂದು ಪ್ರಾಥರ್ಿಸಿದನಂತೆ. ಈ ಭಕ್ತನ ಜೀವನದಲ್ಲಿ ಅದೊಂದು ದಿನ ಶುಭದಿನವಾಗಿ ಪರಿಣಮಿಸಿತು. ಕಾವಗುಡ್ಡೆಯಲ್ಲಿದ್ದ ಶಿವ ಮುಂಜಾವಿನ ಸಮಯ ಭಕ್ತನ ಕನಸಿನಲ್ಲಿ ಕಾಣಿಸಿಕೊಂಡು ಕಾವಗುಡ್ಡೆಯಿಂದ ಕೆಳಗಿಳದು ಬಂದು ಬುಡದ ಬಯಲಲ್ಲಿ ನೆಲೆಸುವೆನೆಂದು ಅಭಯವಿತ್ತ. ಭಕ್ತನಿಗೆ ಕನಸಿನಲ್ಲಿ ಕಾವಗುಡ್ಡೆಯ ಬುಡದಲ್ಲು ದನ ಮತ್ತು ಹುಲಿ ಅನ್ಯೋನ್ಯತೆಯಿಂದ ತಿರುಗಾಡುತ್ತಿರುವ ಸ್ಥಳವೊಂದು ಗೋಚರಿಸಿತು. ಅದೇ ಸ್ಥಳದಲ್ಲಿ(ಈಗಿರುವ ಸಾನಿಧ್ಯದಲ್ಲಿ) ಭಕ್ತನು ಉಷಾಕಾಲದ ಪೂಜಾಸಹಿತವಾಗಿ ಕಾವೇಶ್ವರನನ್ನೂ ಪ್ರತಿಷ್ಠಾಪಿಸಿದನು. ಹೀಗೆ ಕಾವಗುಡ್ಡೆಯಿಂದ ಇಳಿದು ಬಂದ ಶಿವ (ಕಾವೇಶ್ವರ) ಈಗಿರುವ ಸಾನಿಧ್ಯದಲ್ಲಿ ನೆಲೆನಿಂತನು.

By suddi9

Leave a Reply

Your email address will not be published. Required fields are marked *