DSC_7155

456 ಶ್ರೀ ಕ್ಷೇತ್ರ ಪೆರಾರ ದೇವ-ದೈವಸ್ಥಾನ-ಬ್ರಹ್ಮಕಲಶಾಭಿಷೇಕ ಸುದ್ದಿ9 ಬಜಪೆ:ಪಂಚವರ್ಣದ ಪುಣ್ಯಭೂಮಿ ತುಳುವನಾಡಿನ ಸಹಸ್ರಮಾನದ ಐತಿಹ್ಯವುಳ್ಳ ಪರಮ ಪವಿತ್ರ ಸನ್ನಿದಾನವಾಗಿರುವ ಶ್ರೀ ಕ್ಷೇತ್ರ ಪೆರಾರ ಭಕ್ತಿ ಶ್ರದ್ಧೆಯ ತಾಣವಾಗಿರುವ ಪೆರಾರ ದೇವ-ದೈವಸ್ಥಾನದಲ್ಲಿ ಇಂದು ಬ್ರಹ್ಮಕಲಶಾಭಿಷೇಕ ಪುಣ್ಯೋತ್ಸವದ ಅವುಸ್ಮರಣೀಯ ದಿನ. ಕಾರಣಿಕದ ಕ್ಷೇತ್ರದಲ್ಲಿ ಶಕ್ತಿ ಸಂಚಲನ.. ಇಲ್ಲಿನ ದೇವ ನಾಗ, ದೇವ ಶಕ್ತಿಗಳ ಕಾರಣಿಕ ನೆನೆದಾಗ ಜುಮ್ಮೆನ್ನುತ್ತದೆ.ಶ್ರೀಕ್ಷೇತ್ರ ಪೆರಾರದಲ್ಲಿ ಅತಿಶಯ ದೈವಾನುಗ್ರಹಕ್ಕೆ ನಾಗಬ್ರಹ್ಮ ಸಾನಿಧ್ಯ. ಅಪರಿಮಿತ ಪ್ರಜಾಪಾಲನೆಗೆ ಶ್ರಿ ಅರಸು ಉಳ್ಳಾಕ್ಳು, ಸತ್ಯದ ಮಾಡ, ಕ್ಷೇತ್ರದ ಆಧಾರ ಕ್ಷಾತ್ರ, ತೇಜಸ್ಸಿನ ಬ್ರಹ್ಮಬಲಾಂಡಿ ದೈವ, ನ್ಯಾಯ-ಅನ್ಯಾಯ ವಿಮಶರ್ಿಸುವ ಸವಾಧರ್ಿಕಾರದ ಶಕ್ತಿ ಪಿಲಿಚಾಮುಂಡಿ,ಹೌದು ಹಾಗಾಗಿಯೇ ಇದು “ಒರಿ ಬೆಮ್ಮೆರ್ ಮೂವೆರುಳ್ಳಾಕ್ಳು” ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಜತೆಗೆ ಉಳ್ಳಾಯ, ಬಲವಾಂಡಿ, ಪಿಲಿಚಾಮುಂಡಿ ದೈವಗಳು “ಮೂವೆರುಳ್ಳಾಕ್ಳು” ಆಗಿ ಒಂದೇ ಕತ್ತೆರಿ ಮಂಚವಿನಲ್ಲಿ ನೆಲೆಯಾಗಿ ಕಾರಣಿಕ ಮರೆಯುವುದು ಕೂಡ ದೈವೇಚ್ಚೆ. ದೈವಶ್ರೇಷ್ಠ ಬಲವಾಂಡಿ ದೈವಶೇಷ್ಠ “ಬಲವಾಂಡಿ”ಯ ಉದ್ಬವದ ಕತೆ ನಿಜಕ್ಕೂ ರೋಮಾಂಚನಕಾರಿ. ಮಂಗಾರದರಸರ ಸೇನಾಪತಿ ಸತ್ಯ ಬನ್ನಾರ್-ಲಚ್ಚಿ ದಂಪತಿಗೆ ಮಕ್ಕಳಿಲ್ಲದ ಕೊರಗಿನಿಂದ ಹುಡುಕಿಕೊಂಡು ಹೋಗುವಾಗ (ನಾಡೊಂದು ಪೋನಗ) ವಿಶಿಷ್ಟ. ತೇಜಸ್ಸಿನ ಮಗು ಸುಗುತ್ತದೆ.ಅ ಮಗುವಿಗೆ “ನಾಡು” ಎಂದು ನಾಮಕರಣ ಮಾಡುತ್ತಾರೆ. ಮುಂದೆ ತಂದೆ-ತಾಯಿಯ ದಾರುಣ ಅಂತ್ಯವನ್ನು ಕಣ್ಣಾರೆ ಕಾಣುವ ದುಸ್ಥಿತಿ ” ನಾಡು”ವಿಗೆ ಒದಗಿತು. ಮನದಲ್ಲಿ ನಾಸ್ತಿಕತೆ ಮೂಡುತ್ತದೆ. ಮಾದವೂರ ಮಹಾಲಿಂಗೇಶ್ವರ ಸನ್ನಿಧಿಗೆ ಹರಕೆ ಸಮರ್ಪಣೆಗೆ ತೆರಳಲು ದಾರಿ ತೋರಿಸಲೆಂದು ಮಂಗಾರದರಸರ ಕರೆಗೆ ಒಪ್ಪಿದ ನಾಡು ತನ್ನ ನಿಲುವನ್ನು ಸ್ವಷ್ಟಪಡಿಸುತ್ತಾನೆ. ಆಳು ಪಲ್ಲಕ್ಕಿ ಮುತ್ತಿನ ತಾವರೆಯೇರಿದ ಅರಸರ ಮುಂದಿನಿಂದ ಬಿಳಿಕುದುರೆ ಬೆಳ್ಳಿ ಸತ್ತಿಗೆ ಹಿಡಿದು ನಾಡು ಹೊರಡುತ್ತಾವೆ. ಕದ್ರಿ,ಕುಡುಪು, ಗುರುಪು ಮೂಡದಾಯ ಸಾನ, ಮೀಜಾರು ಬಸದಿ, ಮೂಡಬಿದಿರೆ, ನಾಡಬೈಲು ನಾಗಬ್ರಹ್ಮ ಸನ್ನಿಧಿಗೆ ಬಂದಾಗ ಬ್ರಾಹ್ಮಣ ರೂಪದ ನಾಗಬ್ರಹ್ಮರಿಗೂ ನಾಡುವಿಗೂ ಮಾತಾಗುತ್ತದೆ. ಮುಂದೆ ವೇಣೂರು ಮಹಾಲಿಂಗೇಶ್ವರ ಸನ್ನಿಧಿಗೆ ಬಂದಾಗಲೂ ನಾಡುವಿಗೂ ಬ್ರಾಹ್ಮಣ ರೂಪದ ನಾಗಬ್ರಹ್ಮರುಗೂ ಮತ್ತೆ ಮುಖಾಮುಖಿ ಮಾತಾಗಿ ಲೌಕಿಕವಾಗಿ ನಾಡುವನ್ನು ಸೋಲಿಸಲಾಗದೆ ಮಾಯ ಮಾಡುತ್ತಾರೆ. ಬಿಳಿಕುದುರೆಯನ್ನು ಕಲ್ಲಾಗಿಸುತ್ತಾರೆ. ಅರಸರ ಅಳಲಿಗೆ ಒಲಿದ ನಾಗಬ್ರಹ್ಮರ ಅಶರೀರವಾಣಿ ಕೇಳಿಸುತ್ತದೆ. “ನಾಡುವಿನ ಶಾಪ ವಿಮೋಚನೆಯಾಗಿ ಶಕ್ತಿಶಾಲಿ ದೈವವಾಗಿ ಮಂಗಳವಾರದ ದಿನ ಬಲಪುಷ್ಪ ಜನಿವಾರದೊಂದಿಗೆ ಕಿನ್ನಿಮಜಲಿನಲ್ಲಿ ಭೂಮಿ ಒಡೆದು ಉದ್ಬವಿಸುತ್ತಾನೆ.ದೈವಶ್ರೇಷ್ಠನಾಗಿ ಮೆರೆಯುತ್ತಾನೆ” ಹೀಗೆ ಬಲವಾಂಡಿ ದೈವ ಮುಂದೆ ಅರಸು ಉಳ್ಳಾಯ, ಪಿಲಿಚಾಮುಂಡಿ ಜತೆ ಕಿನಿಮಜಲಿನಲ್ಲಿ ನೆಲೆನಿಂತು ನಾಡಿನ ರಕ್ಷಣೆ ಮಾಡುತ್ತಾರೆ. ಪಿಲಿಚಂಡಿ ದೈವ ಕಿರುವಾಳು (ಚಿಕ್ಕ ಆಯುಧ) ಹಿಡಿದು ಪೂರ್ವಕ್ಕೆ ಮುಖ, ಬ್ರಹ್ಮರಿಗೆ ಬೆನ್ನು ಹಾಕಿ ಅಪ್ಪಣೆ ಕೊಡುವ ಕ್ರಮ ಈಗಲೂ ಇದೆ. ಗುಂಡದಲ್ಲಿ ನಾಗಬ್ರಹ್ಮರು, ಬಂಟಕಂಬದಲ್ಲಿ ಬಲವಾಂಡಿ, ಮಾಡದಲ್ಲಿ ಅರಸು ಉಳ್ಳಾಯ ಹಾಗೂ ಪಿಲಿಚಂಡಿ ಗುಡ್ಡೆಯಲ್ಲಿ ವ್ಯಾಘ್ರ ಚಾಮುಂಡಿ ಮೂವರು ಒಟ್ಟಾಗಿ ಇರುವ ಧರ್ಮಚಾವಡಿ, ಚಿತ್ರಕೂಟದಲ್ಲಿ ನೆಲೆನಿಂತ ನಾಗದೇವರು ಕ್ಷೇತ್ರದ ಪುಷ್ಕರಿಣಿ ಭಕ್ತ ಜನರ ಹೃನ್ಮನದಲ್ಲಿ ಭಯ-ಭಕ್ತಿಯ ಸಂಚಲನವುಂಟು ಮಾಡುತ್ತದೆ. 148 ದಿವಸಗಳಲ್ಲಿ ಸಾಕಾರಗೊಂಡ ಸನ್ನಿಧಾನದ ಜಿಣರ್ೋದ್ಧಾರ- ಶ್ರೀ ಕ್ಷೇತ್ರದ ನಾಗಬ್ರಹ್ಮ, ಶಾಸ್ತಾರ, ಇಷ್ಟದೇವತಾ, ಉಳ್ಳಾಯ, ಬಲವಾಂಡಿ, ವ್ಯಾಗ್ರಚಾಮುಂಡಿ, ಪರಿವಾರ ದೈವ ಸಾನ್ನಿಧ್ಯಗಳ ಜಿಣರ್ೋದ್ಧಾರ ಕಾರ್ಯ ದಾಖಲೆ ಅನ್ನುವ ರೀತಿಯಲ್ಲಿ ಶಾಸ್ತ್ರೀಯತೆ, ಸಾಂಪ್ರದಾಯಗಳಿಗೆ ಚ್ಯುತಿಯಾಗದೆ ಕೇವಲ 148 ದಿವಸಗಳ ಕನಿಷ್ಠ ಅವಧಿಯಲ್ಲಿ ಸಾಕಾರಗೊಂಡಿರುವುದು ಕ್ಷೇತ್ರದ ಮಹಿಮೆಯೇ ಸರಿ. ಭಕ್ತರ ದೃವ್ಯದಾನ ಶ್ರಮದಾನಗಳಿಂದ ಪೂರ್ಣಪ್ರಮಾಣದ ಶೋಭಾಯಮಾನ ಆಲಯಗಳು ನವನಿಮರ್ಾಣಗೊಂಡಿವೆ. ದೈವಗಳ ಪಂಚಾಮೃತ ನುಡಿ. ಸಂತೋಸಾಂಡ್. ಒಂಜಿ ರಾಜ್ಯ ನಿಕುಲು ಅಗ್ಗಿದೈಮಠೊಡ್ದು ದಂಬೆಪಾಪು ಮುಟ್ಟ ಸಾರತ್ತ್ ಮಲ್ಲಕ್ಲೆಡ್ದ್ ಪತ್ತಪ್ಪೆ ಬಡವೆರ್ ಮುಟ್ಟ ಬಂಜಿಗ್ ತಿನ್ಪಿನ ಗುಜ್ಜಾರ್ಮೆನ್ ಕಮ್ಮಿ ಪಲ್ಲತದ್ ಎಂಕಲ್ನ ಒರಿ ಬೆಮ್ಮೆರ್ನ ಮೂವೆರ್ ಉಳ್ಳಲ್ನ ಸೇವೆನೇ ಮಲ್ಲಾಂದ್ ಈ ಕಾಲದ ಸೇವೆನ್ ಎಂಕಲೆಗ್ ಒಪ್ಪದ್ದ್ ಕೊರಿಯೆರ್. ಎಂಕುಲ್ ಸಂತೋಸು ಮಲ್ತ್ ಕೈಕೊಂಡ.ಅಂಚೆನೇ ಈ ಕಾಲೊಡ್ದು ಮೇಲ್ಕಾಲ ಮುಟ್ಟ ನಿಕಲೆಗ್ ರಕ್ಷಣೆ ಮಲ್ತ್ ಕಾಪಾಡುವೆ ಭಯ ಮಲ್ಪೊಡ್ಚಿ. 01

12x3 (1)

 

DSC_0586

 

 

4

By suddi9

Leave a Reply

Your email address will not be published. Required fields are marked *