ಬಂಟ್ವಾಳ : ಸಮಾಜ ಭಾಂದವರಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಭಜನೆಯ ಮಹತ್ವವನ್ನು ತಿಳಿಸುತ್ತಾ ಸಾಗರದಲ್ಲಿ ತೆರೆಗಳು ಇರುವುದು ಸಹಜ ಅಂತೆಯೇ ಸಂಸಾರವೆಂಬ ಸಾಗರದಲ್ಲಿ ಸುಖ-ಕಷ್ಟ ನೋವು-ನಲಿವು ಇದ್ದೇ ಇರುತ್ತದೆ. ಸುಖ ಬಂದಾಗ ಹಿಗ್ಗದೆ ದುಖಃ ಬಂದಾಗ ಕುಗ್ಗದೆ ಸದಾ ಸ್ಥಿತಪ್ರಜ್ಞರಾಗಿದ್ದು ಭಗವ್ತ್‌ದರ್ಪಣ ಬುದ್ಧಿಯಿಂದ ಬಾಳಿದರೆ ನೆಮ್ಮದಿ ಶಾಂತಿ ಲಭ್ಯವಾಗುತ್ತದೆ ಎಂದು ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ, ಬಿ.ಸಿ.ರೋಡು ಇದರ ಆಶ್ರಯದಲ್ಲಿ ಗೀತಾಂಜಲಿ ಕಲ್ಯಾಣ ಮಂಟಪ, ಬಿ.ಸಿ.ರೋಡು ಇಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜಾಮಹೋತ್ಸವ ಕಾರ್‍ಯಕ್ರಮದಲ್ಲಿ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸಂಯಮೀಂದ್ರತೀರ್ಥ ಸ್ವಾಮೀಜಿಯವರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

Swamiji Photo
ಸಮಿತಿಯ ಅಧ್ಯಕ್ಷರಾದ ಶ್ರೀ ಯು. ಸುರೇಶ್ ನಾಯಕ್ ಸ್ವಾಮೀಜಿಯವರನ್ನು ಸ್ವಾಗತಿಸಿದರು. ಸಮಿತಿಯ ಸರ್ವ ಸದಸ್ಯರು ಮತ್ತು ಯುವಕ ವೃಂದದವರು ಸಹಕರಿಸಿದರು. ಮಧುಕರ್ ಮಲ್ಯ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಪ್ರಭು ವಂದಿಸಿದರು.

By suddi9

Leave a Reply

Your email address will not be published. Required fields are marked *