ಬೆಳ್ಳೂರು:ಶ್ರೀ ಕಾವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ಧ್ವಜರೋಹಣಗೊಂಡು ಫೆ 21ರಂದು ಗುರುವಾರ “ರಥೋತ್ಸವ” ನಡೆಯಲಿದೆ.ಬೆಳಗ್ಗೆ ಘಂಟೆ 10 ಕ್ಕೆ ರಥಕ್ಕೆ ನವಕ ಕಲಶ ಮಧ್ಯಾಹ್ನ 11 ಗಂಟೆಗೆ ಮಹಾಪೂಜೆ , ಸಾಮೂಹಿಕ ಪ್ರಾರ್ಥನೆ, ದೇವರ ಬಲಿ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಚೆಂಡು, ಸಂಜೆ 6 ಗಂಟೆಗೆ ರಥದಲ್ಲಿ ಹೂವಿನ ಪೂಜೆ, ಸಂಜೆ 6 ಗಂಟೆಯಿಂದ ಊರಿನ ಯುವ ಪ್ರತಿಭೆಗಳಿಂದ ಭರತನಾಟ್ಯ ವೈಭವ ರಾತ್ರಿಗಂಟೆ 9 ರಿಂದ ಉಮೇಶ್ ಮಿಜಾರು ತಂಡದವರು ಅಭಿನಯಿಸುವ “ತೆಲಿಕೆದ ಗೊಂಚಿಲ್” ರಾತ್ರಿ 7 ಗಂಟೆಗೆ ರಥೋತ್ಸವ ರಾತ್ರಿ 8 ಗಂಟೆಗೆ ರಥೋತ್ಸವ ಬಲಿ ಪಲ್ಲಕಿ ಉತ್ಸವ ಮಹಾಪೂಜೆ ರಾತ್ರಿ ಗಂಟೆ 12 ಕ್ಕೆ ಭೂತಬಲಿ, ಶಯನ ಸೇವೆ,ಕವಾಟ ಬಂಧನ ವಿಧಿ ವಿಧಾನಗಳು ನೆರವೇರಲಿದೆ.
