ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ತಿಂಗಳ ಕಾರ್ಯಾಗಾರವು ಬಂಟ್ವಾಳ ತಾಲೂಕಿನ ವಿಠಲ ಶಿಕ್ಷಣ ಸಂಸ್ಥೆಯಲ್ಲಿ ಇಂದು ನಡೆಯಿತು.
ಸ್ಥಳೀಯ ಹವ್ಯಾಸಿ ಕಲಾವಿದರಾದ ಶ್ರೀಮತಿ ಸಿರಿ ಎಲ್ ,ಎಸ್ ಕೂಡೂರು ರವರು ಕಾರ್ಯ ಕ್ರಮವನ್ನು ಉದ್ಘಾಟಿಸಿ ತಮ್ಮಂತಹ ಕಲಾವಿದರನ್ನು ಗುರುತಿಸಿ ತಮ್ಮ ಕರಕೌಶಲದಿಂದ ಮೂಡಿ ಬಂದ ಬೇರೆ ಬೇರೆ ವಿನ್ಯಾಸದ ನಿಟ್ಟಿಂಗ್ ಮಾದರಿಯನ್ನು ಪ್ರದರ್ಶಸಿಸಲು ಅವಕಾಶ ಮಾಡಿಕೊಟ್ಟದ್ದಕ್ಕೆ ಹರ್ಷದ ಮಾತುಗಳೊಂದಿಗೆ ವಂದಿಸಿದರು. ಅತ್ಯಂತ ಸೂಕ್ಷ್ಮ ಮತ್ತು ಸಂಯಮದ ಈ ಕಲೆಯು ತಮ್ಮ ಅಜ್ಜಿಯಿಂದ ಬಂದ ಬಳುವಳಿಯಾಗಿದ್ದು, ಬೆಂಗಳೂರಿನಿಂದ ಹಳ್ಳಿಗೆ ಮದುವೆಯಾಗಿ ಬಂದಾಗ ಸಮಯ ಕಳೆಯಲೆಂದು ಇದನ್ನು ನೆಯ್ಯುವ ಹವ್ಯಾಸ ಮಾಡಿಕೊಂಡದ್ದಕ್ಕೆ ಇದುವೇ ನನ್ನ iಜeಟಿಣiಣಥಿ ಆಯ್ತು. ಹೀಗೆ ಯಾವುದೇ ಒಂದು ರೀತಿಯ ಕಲೆಯ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ನಾವು ತುಂಬಾ ಉಲ್ಲಾಸದಿಂದ ಇರುತ್ತೇವೆ ಎಂಬುದನ್ನು ಖುಷಿಯಾಗಿ ಹಂಚಿಕೊಂಡರು.
ಜನಪದ ಕಲೆಯ ಸಂವಾದದಲ್ಲಿ ಮಾತಿಗೆ ಮುಖಾಮುಖಿಯಾದವರು ವಿಠಲ ವಿದ್ಯಾ ಸಂಸ್ಥೆಯ ಶ್ರೀ ಕಿರಣ್ ಕುಮಾರ್ ಹಾಗೂ ಶ್ರೀ ರಮೇಶ್ ರವರು..
ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ತೀರ್ಪುಗಾರರಾಗಿ ನಿರ್ಣಾಯಕ ಮಾಡುವ ಸಂಧರ್ಭದಲ್ಲಿ ಆಗುವ ಕೆಲವೊಂದು ದ್ವಂದ್ವಗಳನ್ನು ಮುಕ್ತವಾಗಿ ಚರ್ಚಿಸಲಾಯಿತು.
ಜನಪದ ಕಲೆಗಳು ನಮ್ಮ ಪೂರ್ವಜರಿಂದ ಬಂದ ಬಳುವಳಿ. ನಮ್ಮ ಸ್ಥಳೀಯ ಪರಂಪರೆಯನ್ನು ತಿಳಿಸುವ ಜೊತೆಗೆ ಮನೋರಂಜನೆಯ ಜೀವಂತ ಮಾಧ್ಯಮವಾಗಿ ನಮ್ಮ ಸಂಸ್ಕೃತಿಯ ಅಸ್ಮಿತೆಯನ್ನು ಕಟ್ಟಿಕೊಡುತ್ತಿದೆ. ಇದರ ಮೂಲಕ್ಕೆ ಧಕ್ಕೆಯಾಗದೇ ಆಧುನಿಕತೆಯತೆಯ ಸ್ಪರ್ಶದೊಂದಿಗೆ ಮುಂದಿನ ಪೀಳಿಗೆಗೆ ನಮ್ಮ ನಂಬಿಕೆಯನ್ನು ಹಸ್ತಾಂತರಿಸುವ ನಿಟ್ಟಿನಲ್ಲಿ ಇದನ್ನು ಬಳಸಿ ಬೆಳೆಸಬೇಕಾಗಿದೆ..ಆ ಕಾರಣಕ್ಕಾಗಿಯೇ ಇಲಾಖೆಯು ಇದನ್ನು ಒಂದು ಪಾರಂಪರಿಕ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಿಸಿಕೊಟ್ಟಿದೆ. ಆದರೆ ಇದರ ತೀರ್ಪುಗಾರಿಕೆ ಮಾಡುವವರಿಗೆ ಯಾವುದೇ ಮಾರ್ಗದರ್ಶನ, ತರಬೇತಿ ಇಲ್ಲದೇ ದ್ವಂದ್ವವಾಗಿಯೇ ನಿರ್ವಹಿಸಲಾಗುತ್ತಿದೆ..ಎಂಬುದು ಚರ್ಚೆಯಲ್ಲಿ ಮೂಡಿಬಂದ ಅಂಶಗಳಾಗಿವೆ.
ಬಹಳ ಅಚ್ಚುಕಟ್ಟಾಗಿ ಬಂಟ್ವಾಳ ತಾಲ್ಲೂಕು ತಂಡ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ವರ್ಲಿ ಕಲಾವಿದರೆಂದೇ ಪ್ರಸಿದ್ಧರಾಗಿರುವ ಶ್ರೀ ತಾರಾನಾಥ ಕೈರಂಗಳರವರ ನಿರೂಪಣೆಯೊಂದಿಗೆ ಕಾರ್ಯಕ್ರಮವು ಉತ್ತಮವಾಗಿ ಮೂಡಿಬಂತು.

