ಕೈಕಂಬ: ಜಮ್ಮು ಕಾಶ್ಮೀರದ ಪುಲ್ವಾನದಲ್ಲಿ ಪಾಕ್ ಪ್ರೇರಿತ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಸೋಮವಾರ ಎಡಪದವು ಹೃದಯಭಾಗದಲ್ಲಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಜನಾರ್ಧನ್ ಗೌಡ, ಎಡಪದವು ಗ್ರಾ.ಪಂ ಅಧ್ಯಕ್ಷೆ ಮಾಲತಿ, ಎಡಪದವು ಗ್ರಾ.ಪಂ. ಉಪಾಧ್ಯಕ್ಷ ಗಂಗಾಧರ, ಶಾಲಾ ಮುಖ್ಯ ಶಿಕ್ಷಕ ವಾಸು ಕೆ. , ಸುದರ್ಶನ್ ಪೂಂಜ, ಮಾಧವ ಶೆಣೈ, ಹಾಗೂ ಎಡಪದವಿನ ನಾಗರಿಕರು ಶ್ರದ್ಧಾಂಜಲಿಯಲ್ಲಿ ಭಾಗವಹಿಸಿದರು.




