ಬಂಟ್ವಾಳ :  ಜನವರಿ 8 ರಂದು ನಿಧನರಾದ ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷ ಶೈಖುನಾ ಅಲ್‍ಹಾಜ್ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಅವರ 40ನೇ ದಿನ ದುವಾ ಮಜ್ಲಿಸ್, ಖತ್‍ಮುಲ್ ಖುರ್‍ಆನ್, ತಹ್ಲೀಲ್ ಸಮರ್ಪಣಾ ಕಾರ್ಯಕ್ರಮ ಭಾನುವಾರ ಮಿತ್ತಬೈಲು ಕೇಂದ್ರ ಜುಮಾ ಮಸೀದಿಯಲ್ಲಿ ನಡೆಯಿತು.

Mithbail 1
ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಶೈಖುನಾ ಎಂ.ಪಿ. ಉಸ್ತಾದ್, ಸಯ್ಯಿದ್ ಹಮೀದ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಸಯ್ಯಿದ್ ಜಿಫ್ರಿ ತಂಙಳ್ ಬೆಳ್ತಂಗಡಿ, ಬಂಬ್ರಾಣ ಉಸ್ತಾದ್, ಮಿತ್ತಬೈಲು ಉಸ್ತಾದ್ ಅವರ ಪುತ್ರ ಇರ್ಶಾದ್ ದಾರಿಮಿ ಅಲ್-ಜಝರಿ, ಸ್ವದಖತುಲ್ಲಾ ಫೈಝಿ, ಮಿತ್ತಬೈಲು ಖತೀಬ್ ಅಶ್ರಫ್ ಫೈಝಿ ಕೊಡಗು ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಮಿತ್ತಬೈಲು ಮಸೀದಿ ಆಡಳಿತ ಸಮಿತಿ ಹಾಗೂ ಜಮಾಅತ್ ವತಿಯಿಂದ ಸಾರ್ವಜನಿಕ ಅನ್ನದಾನ ನಡೆಯಿತು.

By suddi9

Leave a Reply

Your email address will not be published. Required fields are marked *