ಅಡ್ಡೂರು: ಎಸ್ಕೆಎಸ್ಸೆಸೆಫ್ ಕಾಂಜಿಲಕೊಡಿ ಶಾಖೆ ವತಿಯಿಂದ “ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ ಹಾಗೂ ಅಗಲಿದ ಶೈಖುನಾ ಮಿತ್ತಬೈಲ್ ಉಸ್ತಾದರ 40ನೇ ದಿನದ ದುವಾ” ಕಾರ್ಯಕ್ರಮ ಇಲ್ಲಿನ ಕಾಂಜಿಲಕೋಡಿಯ ಬದ್ರುಲ್ ಹುದಾ ಜುಮಾ ಮಸೀದಿ ವಠಾರದಲ್ಲಿ ಶನಿವಾರ ನಡೆಯಿತು.20190216_192835

ಮಾಜಿ ಖತೀಬ್ ಎಸ್.ಬಿ.ಯೂಸುಫ್ ಮುಸ್ಲಿಯಾರ್ ದುವಾಶೀರ್ವಚನ ನೀಡಿದರು. ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿಯ ಖತೀಬ್ ಅಬ್ದುಲ್ ರಝಾಕ್ ದಾರಿಮಿ ಪ್ರಾಸ್ತಾವಿಕ ಮಾತುಗಳನ್ನಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.20190216_204321

ಬಳಿಕ ಮಾತನಾಡಿದ ಎಸ್ಕೆಎಸ್ಸೆಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಅಹ್ಲ್ ಸುನ್ನತ್ ವಲ್ ಜಮಾಅತಿನ ಪ್ರತಿಯೊಂದು ಆದರ್ಶಗಳನ್ನು ಸ್ವೀಕರಿಸಿ ಪಾಲಿಸುವ ಯುವ ಸಮೂಹವೊಂದನ್ನು ಮುಸ್ಲಿಂ ಸಮುದಾಯಕ್ಕೆ ಸಮರ್ಪಿಸಿದ್ದು ಎಸ್ಕೆಎಸ್ಸೆಸೆಫ್ ನ ದೊಡ್ಡ ಶಕ್ತಿ ಎಂದವರು, ಅಹ್ಲ್ ಸುನ್ನತ್ ನ ಆದರ್ಶಗಳಿಗೆ ಬದ್ಧರಾದ ಜನತೆ ಇಸ್ಲಾಮಿಗೆ ಅವಶ್ಯ. ಸಮುದಾಯದ ಸಬಲೀಕರಣದ ಕುರಿತು ಮಾತನಾಡುವ ಪ್ರತಿಯೋರ್ವನು ಸಮುದಾಯದ ಶಕ್ತಿ ಎಂದು ವಿವರಿಸಿದರು.20190216_204427

ಈ ವೇಳೆ ಹಾಜಿ ಎಂ.ಎಚ್.ಮುಹಿಯುದ್ದೀನ್ ಸ್ಮರಣಾ ಸಂಚಿಕೆ ಬಿಡುಗಡೆಗೊಳಿಸಿದರು. ಶೈಖುನಾ ಅಸೈಯ್ಯದ್ ಅಲ್ ಹಾದಿ ಯಹಿಹ್ಯಾ ತಂಙಳ್ ಸಲ್ಮಾರ ದುವಾ ನೇತೃತ್ವ ವಹಿಸಿದ್ದರು. ಹುಸೈನ್ ದಾರಿಮಿ ರೆಂಜಲಾಡಿ, ಟಿ.ಕೆ.ಅಬ್ದುಲ್ ರಹಿಮಾನ್, ಶೈಖುನಾ ಜಬ್ಬಾರ್ ಉಸ್ತಾದ್ ಪುತ್ರ ಕೆ.ಪಿ.ಇರ್ಶಾದ್ ಹುಸೈನ್ ದಾರಿಮಿ, ಇಲ್ಯಾಸ್ ಅರ್ಶದಿ ಆತೂರು, ಮೆಟ್ರೋ ಶಾಹುಲ್ ಹಮೀದ್ ಹಾಜಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಎಂ.ಎ.ಅಹ್ಮದ್ ಬಾವಾ ಅಧ್ಯಕ್ಷತೆ ವಹಿಸಿದ್ದರು. ಅಡ್ಡೂರು ಬದ್ರಿಯಾ ಜುಮಾ ಮಸೀದಿ ‌ಖತೀಬ್ ಶರೀಫ್ ದಾರಿಮಿ, ಟಿ.ಸಯ್ಯದ್ ತೋಕೂರು, ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ಅಧ್ಯಕ್ಷ ಟಿ.ಪಿ.ಜಮಾಲುದ್ದೀನ್ ದಾರಿಮಿ, ಜಿ.ಝಕರಿಯಾ ಹಾಜಿ, ಬಿಎಚ್ ಜೆಎಂ ಉಪಾಧ್ಯಕ್ಷ ಎ.ಕೆ.ರಿಯಾಝ್, ಕೋಶಾಧಿಕಾರಿ ಎ.ಕೆ.ಹಾರಿಸ್, ಹಂಝ ಮುಸ್ಲಿಯಾರ್, ಅಬೂಬಕ್ಕರ್ ಸಿದ್ದೀಕ್ ದಾರಿಮಿ, ಆರೀಫ್ ಕಮ್ಮಾಜೆ, ಹಸನ್ ಪೊನ್ನೆಲ, ಕೆ.ಆದಂ ಮತ್ತಿತರರು ಉಪಸ್ಥಿತರಿದ್ದರು.

ಎಸ್ಕೆಎಸ್ಸೆಸೆಫ್ ಕಾಂಜಿಲಕೋಡಿ ಶಾಖೆ ಅಧ್ಯಕ್ಷ ಮೊಹಮ್ಮದ್ ಹಾರಿಸ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಅಬ್ದುಲ್ ಸಲಾಂ ಅಡ್ಡೂರು ವಂದಿಸಿದರು.‌ ಎಸ್ಕೆಎಸ್ಸೆಸೆಫ್ ದ.ಕ. ಜಿಲ್ಲಾ ಕಾರ್ಯದರ್ಶಿ ಎಂ.ಎ.ಮುಹಮ್ಮದ್ ಕುಂಞಿ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *